ಭದ್ರಾವತಿ ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶುಕ್ರವಾರ ಜಯತೀರ್ಥರ ಆರಾಧನೆ ನಡೆಯಿತು.
ಭದ್ರಾವತಿ, ಜು. ೭ : ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶುಕ್ರವಾರ ಜಯತೀರ್ಥರ ಆರಾಧನೆ ನಡೆಯಿತು.
ಬೆಳಿಗ್ಗೆ ನಿರ್ಮಾಲ್ಯ, ಪಂಚಾಮೃತ ಅಭಿಷೇಕ ಮತ್ತು ಪ್ರಾಕಾರದ ಒಳಗಡೆ ರಥೋತ್ಸವ ಹಾಗೂ ಶಿವಮೊಗ್ಗ ಶ್ರೀನಿಧಿ ಗುಡಿ ಅವರಿಂದ ಜಯತೀರ್ಥರ ಕುರಿತು ಉಪನ್ಯಾಸ ನಡೆಯಿತು. ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ನೆರೆವೇರಿತು.
ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷೆ ಸುಮಾ ರಾಘವೇಂದ್ರ ತಂತ್ರಿ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್, ನಿರಂಜನಾಚಾರ್ಯ, ಮಧುರ, ಜಯತೀರ್ಥ, ಗೋಪಾಲಕೃಷ್ಣ ಆಚಾರ್, ಶ್ರೀನಿವಾಸ ಆಚಾರ್, ಶುಭ ಗುರುರಾಜ್, ಸುಪ್ರೀತಾ ತಂತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment