ಜಿ.ಆರ್ ಲವ
ಭದ್ರಾವತಿ : ತಾಲೂಕಿನ ಗೋಣಿಬೀಡು, ಮಲ್ಲಿಗೇನಹಳ್ಳಿ ನಿವಾಸಿ, ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಕನ್ನಡ ವಿಭಾಗದ ಅಧ್ಯಾಪಕ ಜಿ.ಆರ್ ಲವ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರ್ರೇಟ್ ಪದವಿ ಪಡೆದುಕೊಂಡಿದ್ದಾರೆ.
ಹಲವಾರು ವರ್ಷಗಳಿಂದ ಅಧ್ಯಾಪಕ ವೃತ್ತಿಯೊಂದಿಗೆ ರಂಗಭೂಮಿ, ಸಾಹಿತ್ಯ, ನಾಟಕ ಹಾಗು ಜಾನಪದ ಕಲೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜಿ.ಆರ್ ಲವ ಅವರು ವಿಶ್ವವಿದ್ಯಾಲಯದ ಕನ್ನಡ ಭಾಷಾ ನಿಕಾಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳಿ. ಮುಖ್ಯಸ್ಥರು ಹಾಗು ಪ್ರಾಧ್ಯಾಪಕರಾ ಡಾ. ಬಿ.ಎಂ ಪುಟ್ಟಯ್ಯ ಅವರ ಮಾರ್ಗದರ್ಶನದಲ್ಲಿ ಕನ್ನಡ ನಾಟಕಗಳು : ಓದಿನ ಆಯಾಮಗಳು (ಆಯ್ದ ನಾಟಕಗಳನ್ನು ಅನುಲಕ್ಷಿಸಿ) ಎಂಬ ಮಹಾಪ್ರಬಂಧ ಮಂಡಿಸಿದ್ದರು.
ಜ.೧೦ ರಂದು ನಡೆದ ಹಂಪಿಯ ನುಡಿಹಬ್ಬ-೩೨ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ, ಸಮಕುಲಾಧಿಪತಿ ಡಾ.ಎಂ.ಸಿ. ಸುಧಾಕರ್ ಅವರಿಂದ ಪದವಿ ಸ್ವೀಕರಿಸಿದರು. ಕನ್ನಡ ನಾಟಕಕಾರ, ವಿಮರ್ಶಕ ಹಾಗು ಪ್ರಾಧ್ಯಾಪಕ ಡಾ. ರಾಜಪ್ಪ ದಳವಾಹಿ ಮಹಾಪ್ರಬಂಧಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲವ ಅವರು ಗೋಣಿಬೀಡು, ಮಲ್ಲಿಗೇನಹಳ್ಳಿ ರಂಗಮ್ಮ-ರಾಮೇಗೌಡ ದಂಪತಿ ಪುತ್ರರಾಗಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಅಧ್ಯಾಪಕ ವೃತ್ತಿಯಲ್ಲಿ ತೊಡಗಿದ್ದು, ಹಲವು ವಿಭಿನ್ನತೆ ಹಾಗು ಕ್ರಿಯಾಶೀಲತೆಯೊಂದಿಗೆ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಲವ ಅವರಿಗೆ ತಾಯಿ ರಂಗಮ್ಮ, ಪತ್ನಿ ಲಾವಣ್ಯ ಮತ್ತು ಸಹೋದರ ಜಿ.ಆರ್ ತ್ಯಾಗರಾಜ ಹಾಗು ಜಯಕರ್ನಾಟಕ ಶಂಕರಘಟ್ಟ ಘಟಕ, ಸಹ್ಯಾದ್ರಿ ಕಲಾತಂಡ, ಸಹ್ಯಾದ್ರಿ ಕಾಲೇಜಿನ ಅಧ್ಯಾಪಕ ವೃಂದ, ಕನ್ನಡ ಅಧ್ಯಾಪಕರ ವೇದಿಕೆ ಹಾಗು ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ತಂಡ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಅಭಿನಂದಿಸಿವೆ.