ಭದ್ರಾವತಿಯಲ್ಲಿ ಸೇವಾ ನಿರತರ ತಂಡದಿಂದ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್, ಸತೀಶ್ ಗೌಡ ಹಾಗೂ ತಂಡವನ್ನು ಅಭಿನಂದಿಸಲಾಯಿತು.
ಭದ್ರಾವತಿ: ಹಳೇನಗರದ ಸ್ವರ್ಣ ಟ್ರಾವೆಲ್ಸ್, ವಾಣಿ ಸ್ಟ್ರೋರ್‍ಸ್, ಮಾಜಿ ಸೈನಿಕರನ್ನೊಳಗೊಂಡ ಸೇವಾ ನಿರತರ ತಂಡ ಲಾಕ್‌ಡೌನ್ ಘೋಷಣೆಯಾದಾಗಿನಿಂದಲೂ ಕಡು ಬಡವರು, ನಿರಾಶ್ರಿತರು, ಬೀದಿ ಬದಿ ವಾಸಿಗಳು, ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿ ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳು, ದಾನಿಗಳ ನೆರವಿನಿಂದ ಪ್ರತಿದಿನ ಸಾವಿರಾರು ಮಂದಿಗೆ ಅಡುಗೆ ತಯಾರಿಸಿ ವಿತರಿಸುವ ಮೂಲಕ ಗಮನ ಸೆಳೆದಿತ್ತು. ಇದೀಗ ಸೇವಾ ಕಾರ್ಯಕ್ಕೆ ತೆರೆ ಎಳೆದು ಸಹಕರಿಸಿದವರಿಗೆ ಕೃತಜ್ಞತಾ ಕಾರ್ಯಕ್ಕೆ ಮುಂದಾಗಿದೆ.ಮಂಗಳವಾರ ಸೇವಾ ಕಾರ್ಯಕ್ಕೆ ಸಹಕರಿಸಿದ ಪಾತ್ರೆ, ಶಾಮಿಯಾನ, ಹಣ್ಣು, ತರಕಾರಿ, ಆಹಾರ ಸಾಮಗ್ರಿ ಕೊಡುಗೆಯಾಗಿ ನೀಡಿದ ದಾನಿಗಳ ಬಳಿ ತೆರಳಿ ಅವರನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ಅವರ ಅನಿಸಿಕೆಗಳನ್ನು ಹಂಚಿ ಕೊಂಡಿತು.
ಇದೆ ರೀತಿ ನ್ಯೂಟೌನ್ ಭಾಗದಲ್ಲಿ ಪ್ರತಿ ದಿನ ಆಹಾರ ತಯಾರಿಕೆ, ಸಂಕಷ್ಟಕ್ಕೆ ಒಳಗಾದವರಿಗೆ ದಿನಸಿ ಸಾಮಗ್ರಿ ಸೇರಿದಂತೆ ಇನ್ನಿತರ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಸ್ನೇಹ ಜೀವಿ ಬಳಗ ಸಹ ಸೇವಾ ನಿರತರ ತಂಡಕ್ಕೆ ಆಹಾರ ಸಾಮಗ್ರಿ ಕೊಡುಗಿ ನೀಡಿತ್ತು. ಈ ಹಿನ್ನಲೆಯಲ್ಲಿ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್, ಸತೀಶ್ ಗೌಡ ಹಾಗೂ ತಂಡವನ್ನು ಅಭಿನಂದಿಸಲಾಯಿತು.
No comments:
Post a Comment