ಭದ್ರಾವತಿ, ಜು. 17: ನಗರದ ಲಯನ್ಸ್ ಮತ್ತು ಲಿಯೋ ಕ್ಲಬ್‌ಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು. 18ರಂದು ಬೆಳಿಗ್ಗೆ 10.30ಕ್ಕೆ ನ್ಯೂಟೌನ್ ಲಯನ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಾಜಿ ಜಿಲ್ಲಾ ಗವರ್ನರ್ ಬಿ.ಎಸ್ ನಾಗಪ್ರಕಾಶ್ ಪದಗ್ರಹಣ ನೆರವೇರಿಸಿ ಕೊಡಲಿದ್ದು, ಮಾಜಿ ಜಿಲ್ಲಾ ಗವರ್ನರ್ ಬಿ. ದಿವಾಕರ ಶೆಟ್ಟಿ, ಉಪ ಜಿಲ್ಲಾ ಗವರ್ನರ್ ಕೆ.ಸಿ ವೀರಭದ್ರಪ್ಪ ಉಪಸ್ಥಿತರಿರುವರು. ಕ್ಲಬ್ ಅಧ್ಯಕ್ಷ ಎಚ್.ಆರ್ ಕುಮಾರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಕೆ.ವಿ ಚಂದ್ರಶೇಖರ್ ನೇತೃತ್ವದ ಕಾರ್ಯದರ್ಶಿ ಆರ್. ರಾಮಮೂರ್ತಿ ಮತ್ತು ಖಜಾಂಚಿ ಎನ್ ಶಿವಕುಮಾರ್ ಅವರನ್ನೊಳಗೊಂಡ ನೂತನ ಲಯನ್ಸ್ ತಂಡ ಹಾಗೂ ಸಿ. ಸಿಂಚನ ನೇತೃತ್ವದ ಕಾರ್ಯದರ್ಶಿ ಆರ್. ನವೀನ್ ಮತ್ತು ಖಜಾಂಚಿ ಲಕ್ಷ್ಮೀ ಎಸ್ ಕುಮಾರ್ ಅವರನ್ನೊಳಗೊಂಡ ನೂತನ ಲಿಯೋ ತಂಡ ಪದಗ್ರಹಣ ಸ್ವೀಕರಿಸಲಿವೆ.
No comments:
Post a Comment