ಭದ್ರಾವತಿ, ಆ. ೧೦: ನಗರದ ಅಪ್ಪರ್ ಹುತ್ತಾದಲ್ಲಿರುವ ಅನನ್ಯ ಎಜ್ಯುಕೇಷನ್ ಟ್ರಸ್ಟ್‌ನ ಅನನ್ಯ ಪ್ರೌಢಶಾಲೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿದೆ.
ಈ ಶಾಲೆ ಕಳೆದ ೫ ವರ್ಷಗಳಿಂದ ನಿರಂತರವಾಗಿ ಉತ್ತಮ ಫಲಿತಾಂಶ ಹೊಂದಿದ್ದು, ಈ ಬಾರಿ ೨ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೧೯ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ೭ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕೃಷ್ಣಮೂರ್ತಿ .ಜೆ-೫೮೭, ಶ್ವೇತ .ಎಸ್-೫೩೩, ಪವನ್ .ಟಿ.ಎಂ-೫೨೩, ಭೂಮಿಕ .ಎಂ-೫೨೨, ಆರ್. ಧನುಶ್ರೀ-೫೧೮ ಮತ್ತು ಸೈಯದ್ ಹುಸೇನ್-೫೦೭ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಎಜ್ಯುಕೇಷನ್ ಟ್ರಸ್ಟ್‌ನ ಅಧ್ಯಕ್ಷರು, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
ಎಸ್‌ಎವಿ ಆಂಗ್ಲ ಪ್ರೌಢಶಾಲೆ ಶೇ.೧೦೦ರಷ್ಟು ಫಲಿತಾಂಶ:
ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಆಂಗ್ಲ ಪ್ರೌಢಶಾಲೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿದೆ.
ವಿದ್ಯಾಸಂಸ್ಥೆಯ ೧೦೭ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ೮ ವಿದ್ಯಾರ್ಥಿಗಳು ೬೦೦ಕ್ಕೂ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. ಎ+ ಶ್ರೇಣಿಯಲ್ಲಿ ೩೯ ವಿದ್ಯಾರ್ಥಿಗಳು, ಎ ಶ್ರೇಣಿಯಲ್ಲಿ ೪೧ ವಿದ್ಯಾರ್ಥಿಗಳು, ಬಿ+ ಶ್ರೇಣಿಯಲ್ಲಿ ೧೭ ವಿದ್ಯಾರ್ಥಿಗಳು, ಬಿ ಶ್ರೇಣಿಯಲ್ಲಿ ೮ ವಿದ್ಯಾರ್ಥಿಗಳು ಮತ್ತು ಸಿ+ ಶ್ರೇಣಿಯಲ್ಲಿ ೨ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.
ತೇಜಸ್ವಿನಿ ಎಸ್ ಚಿಕ್ಕಮಠ್-೬೨೦, ಬೆಳ್ಳಿ ಬಿ.ಯು-೬೧೮, ಚೇತನ .ಟಿ-೬೧೪, ನಿಸರ್ಗ .ಆರ್-೬೦೬, ನಕ್ಷತ್ರ .ಆರ್-೬೦೫, ಗಗನ್. ಎಂ-೬೦೪, ಚಂದನ ಬಿ.ಎನ್-೬೦೩, ಸೋಹನ್ ಕುಮಾರ್ .ಆರ್-೬೦೦, ಭಾವನ .ಎನ್-೫೯೮ ಮತ್ತು ಗೋಕುಲ್ ಆದಿತ್ಯ ಬಿ.ಜೆ-೫೯೬ ಅಂಕಗಳನ್ನು ಪಡೆದುಕೊಂಡಿದ್ದಾರೆ.
ವಿಇಎಸ್ ವಿದ್ಯಾಸಂಸ್ಥೆ ಆಂಗ್ಲ ಮಾಧ್ಯಮ ಶೇ.೮೧, ಕನ್ನಡ ಮಾಧ್ಯಮ ಶೇ.೭೨ ಫಲಿತಾಂಶ:
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಗರದ ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗ ಶೇ.೮೧ ಹಾಗೂ ಕನ್ನಡ ಮಾಧ್ಯಮ ವಿಭಾಗ ಶೇ.೭೨ರಷ್ಟು ಫಲಿತಾಂಶ ಪಡೆದುಕೊಂಡಿವೆ.
ಆಂಗ್ಲ ಮಾಧ್ಯಮ ವಿಭಾಗದಲ್ಲಿ ೭ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೨೨ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ೮ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ. ವಿಕಾಸ ಬಿ.ಎಂ-೫೯೭, ಪೂಜಾ .ಸಿ-೫೮೭, ಹಾಜ್ ಉರ್ ರಹಮಾನ್-೫೭೧, ಕೋಮಲ್‌ಸಿಂಗ್-೫೬೫, ಮೋನಿಶಾ-೫೬೨, ರಮ್ಲಾ ಮೊಹಿಬ್-೫೫೯ ಮತ್ತು ವಿಜೀಯಾ ತಸ್ಲೀಮ್-೫೪೯ ಅತಿಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.
ಕನ್ನಡವಿಭಾಗದಲ್ಲಿ ಎಂ. ಮುಸ್ಕಾನ್-೫೦೦, ಸೈಯದ್ ಜೈಬಾ ಜೋಹರ್-೪೭೪, ಮೌನಲಿಸ್-೪೫೮, ವರ್ಷಣಿ .ಎನ್-೪೫೭ ಮತ್ತು ಪ್ರಿಯದರ್ಶಿನಿ-೪೫೭ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆ ಪದನಿಮಿತ್ತ ಛೇರ‍್ಮನ್ ಎನ್. ಕೃಷ್ಣಪ್ಪ ಮತ್ತು ಪದಾಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
ಈಶ್ವರಮ್ಮ ಪ್ರೌಢಶಾಲೆಗೆ ಶೇ. ೯೩.೯೬ ಫಲಿಶಾಂಶ:
ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಈಶ್ವರಮ್ಮ ಪ್ರೌಢಶಾಲೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೩.೯೬ ಫಲಿತಾಂಶ ಪಡೆದುಕೊಂಡಿದೆ.
ಒಟ್ಟು ೧೧೬ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅತ್ಯುನ್ನತ ಶ್ರೇಣಿಯಲ್ಲಿ ೨೬ ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ ೭೬ ವಿದ್ಯಾರ್ಥಿಗಳು ಹಾಗು ದ್ವಿತೀಯ ದರ್ಜೆಯಲ್ಲಿ ೭ ವಿದ್ಯಾರ್ಥಿಗಳು ಒಟ್ಟು ೧೦೯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಧನುಷ್-೫೯೮, ಸುಧೀಂದ್ರ .ಪಿ-೫೯೫, ಚರಿತ ಎಂ.-೫೯೧, ಶಿವಾನಿ ಟಿ.ಆರ್-೫೯೩, ಲಿಖಿತರಾಜ್-೫೯೦, ಅಮಿತ್‌ಗೌಡ-೫೮೭, ಅಂಕಿತಾ ಎಂ.-೫೭೮, ಸೂರಜ್ .ವಿ-೫೬೪, ಕವನ .ಎಸ್-೫೭೬, ತಮನ್ನ-೫೭೫, ಶ್ರೇಯಸ್ .ವಿ-೫೭೨ ಮತ್ತು ಭೂಮಿಕ ಎಂ.ಡಿ-೫೬೫ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತಾಧಿಕಾರಿ ಪ್ರಭಾಕರ ಬೀರಯ್ಯ, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
No comments:
Post a Comment