ಶಾಂತಿಬಾಯಿ
ಭದ್ರಾವತಿ, ಸೆ. ೧೦: ನಗರದ ಹಾಲಪ್ಪ ವೃತ್ತದಲ್ಲಿರುವ ಗೌತಮ್ ಸೈಕಲ್ ಸ್ಟೋರ್ ಮಾಲೀಕ ಲಲಿತ್‌ಕುಮಾರ್ ಜೈನ್‌ರವರ ತಾಯಿ ಶಾಂತಿಬಾಯಿ(೮೦) ಗುರುವಾರ ನಿಧನ ಹೊಂದಿದರು.
೪ ಹೆಣ್ಣು, ೨ ಗಂಡು ಮಕ್ಕಳು, ಮೊಮ್ಮಕ್ಕಳು, ಸೊಸೆ ಹಾಗು ಅಳಿಯಂದಿರನ್ನು ಹೊಂದಿದ್ದರು. ಮಧ್ಯಾಹ್ನ ನಗರದ ಜೈನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಹಳೇನಗರದ ಭೂತನಗುಡಿಯಲ್ಲಿ ವಾಸವಾಗಿದ್ದ ಶಾಂತಿಬಾಯಿಯವರು ಜೈನ ಧರ್ಮದ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವ ಜೊತೆಗೆ ಚಾತುರ್ಮಾಸ ಅವಧಿಯಲ್ಲಿ ಉಪವಾಸ ವ್ರತ ಕೈಗೊಳ್ಳುತ್ತಿದ್ದರು.
ಮೃತರ ನಿಧನಕ್ಕೆ ನಗರದ ಜೈನ ಸಮಾಜ, ರೋಟರಿ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.
No comments:
Post a Comment