ಚಿರತೆ ಚರ್ಮ, ಕಾಡು ಕೋಣದ ಕೊಂಬು ಮತ್ತು ಜಿಂಕೆ ಕೊಂಬುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಇಬ್ಬರು ವ್ಯಕ್ತಿಗಳನ್ನು ಭದ್ರಾವತಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ಘಟನೆ ಬುಧವಾರ ನಡೆದಿದೆ.
ಭದ್ರಾವತಿ, ಸೆ. ೨: ಚಿರತೆ ಚರ್ಮ, ಕಾಡು ಕೋಣದ ಕೊಂಬು ಮತ್ತು ಜಿಂಕೆ ಕೊಂಬುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಇಬ್ಬರು ವ್ಯಕ್ತಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ಘಟನೆ ಬುಧವಾರ ನಡೆದಿದೆ.
ತಾಲೂಕಿನ ಬಾಳೆಕಟ್ಟೆ ಗ್ರಾಮದ ನಿವಾಸಿಗಳಾದ ಪ್ರೇಮನಾಥ ರೆಡ್ಡಿ ಮತ್ತು ಮಂಜುನಾಥ ಎಂಬುವರನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದ್ದು, ಒಂದು ಚಿರತೆ ಚರ್ಮ, ಒಂದು ಕಾಡು ಕೋಣದ ಕೊಂಬು, ಒಂದು ಜಿಂಕೆ ಕೊಂಬು ವಶಪಡಿಸಿಕೊಳ್ಳಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ ಗಾಮನಗಟ್ಟಿ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ ಸುಬ್ರಮಣ್ಯ ಮತ್ತು ವಲಯ ಅರಣ್ಯಾಧಿಕಾರಿ ಕೆ.ಎಚ್ ಮಂಜುನಾಥ್ ಹಾಗು ಚನ್ನಗಿರಿ ಪೊಲೀಸ್ ಅರಣ್ಯ ಸಂಚಾರಿ ದಳ ನೇತೃತ್ವದ ತಂಡದ ಕಾರ್ಯಾಚರಣೆಯಲ್ಲಿ ಚನ್ನಗಿರಿ ಪಿಎಸ್‌ಐ ಭಾರತಿ, ಸಿಬ್ಬಂದಿಗಳಾದ ಪ್ರಕಾಶ, ರವಿ, ಕೃಷ್ಣ, ಶಿವಲಿಂಗ, ನೀಲಾವತಿ , ರಾಘು ಮತ್ತು ಭದ್ರಾವತಿ ಅರಣ್ಯ ವಿಭಾಗದ ಉಪ ವಲಯ ಅರಣ್ಯಾಧಿಕಾರಿಗಳಾದ ಅಣ್ಣಾನಾಯ್ಕ, ಬಿ.ಆರ್ ದಿನೇಶ್ ಕುಮಾರ್, ನವೀನ್, ದೇವರಾಜೇಗೌಡ, ಅರವಿಂದ, ಪ್ರತಾಪ್, ಮಂಜುನಾಥ್, ಎನ್. ರಾಜಪ್ಪ, ಭಾಸ್ಕರ್, ಶೇಖರ್, ಚೌಗುಲೆ, ರಘು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment