ತುರ್ತು ಕಾರ್ಯಾಚರಣೆಯಲ್ಲಿ ಓರ್ವನ ರಕ್ಷಣೆ
ಶನಿವಾರ ಮಧ್ಯಾಹ್ನ ಭದ್ರಾವತಿ ದೊಡ್ಡಗೊಪ್ಪೇನಹಳ್ಳಿ ಬಳಿ ಗೊಂದಿ ಚಾನಲ್‌ನಲ್ಲಿ ಈಜಲು ಹೋಗಿ ಇಬ್ಬರು ಯುವಕರ ಮೃತಪಟ್ಟಿರುವುದು.
ಭದ್ರಾವತಿ, ಅ. ೩: ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ದೊಡ್ಡಗೊಪ್ಪೇನಹಳ್ಳಿ ಬಳಿ ಗೊಂದಿ ಚಾನಲ್‌ನಲ್ಲಿ ನಡೆದಿದೆ.
ಜನ್ನಾಪುರದ ನಿವಾಸಿಗಳಾದ ರಾಜೇಶ್(೩೮) ಮತ್ತು ಮನೋಜ್(೧೭) ಎಂಬುವರು ಸಾವನ್ನಪ್ಪಿದ್ದು, ಓರ್ವನನ್ನು ರಕ್ಷಿಸಲಾಗಿದೆ. ಒಟ್ಟು ೯ ಜನರು ಚಾನಲ್‌ನ ಆಂಜನೇಯ ಬಂಡೆ ಬಳಿ ಈಜಲು ತೆರಳಿದ್ದು, ಈ ಪೈಕಿ ಈ ಇಬ್ಬರು ನೀರಿನ ಸುಳಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ತುರ್ತು ಕಾರ್ಯಾಚರಣೆ ನಡೆಸಿ ಕಾರ್ತಿಕ್(೧೩) ಎಂಬ ಬಾಲಕನನ್ನು ರಕ್ಷಿಸಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಭಾಗದಲ್ಲಿ ಈ ಹಿಂದೆ ಸಹ ಈ ರೀತಿಯ ಘಟನೆಗಳು ನಡೆದಿವೆ ಎನ್ನಲಾಗಿದೆ.
No comments:
Post a Comment