೨೦೨೦-೨೦೨೫ನೇ ಸಾಲಿನ ಭದ್ರಾವತಿ ಸವಿತಾ ಸಮಾಜದ ವಿವಿದ್ಧೋದ್ಧೇಶ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಆಯ್ಕೆಯಾದವರನ್ನು ಅಭಿನಂದಿಸಲಾಯಿತು.
ಭದ್ರಾವತಿ, ನ. ೨: ೨೦೨೦-೨೦೨೫ನೇ ಸಾಲಿನ ನಗರದ ಸವಿತಾ ಸಮಾಜದ ವಿವಿದ್ಧೋದ್ಧೇಶ ಸಹಕಾರ ಸಂಘದ ನಿರ್ದೇಶಕರ ಚುನಾವಣೆ ಯಶಸ್ವಿಯಾಗಿ ನಡೆಯಿತು.
ಚುನಾವಣೆಯಲ್ಲಿ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ಎನ್ ಜಯರಾಂ, ಟಿ. ತಿಪ್ಪೆಸ್ವಾಮಿ, ನರಸಿಂಹಮೂರ್ತಿ, ರಾಮ್‌ದಾಸ್, ಲೀಲಾವತಿ, ಪರಮೇಶ್, ಎಸ್. ವಿಶ್ವನಾಥ್, ಜಿ. ಹೀರಾಲಾಲ್ ಮತ್ತು ವೆಂಕಟೇಶ್ ಅತಿ ಹೆಚ್ಚಿನ ಮತಗಳಿಂದ ಆಯ್ಕೆಯಾದ್ದು, ಉಳಿದಂತೆ ಹಿಂದುಳಿದ ಎ ಸ್ಥಾನಕ್ಕೆ ಎನ್.ಎಸ್ ರಮೇಶ್ ಹಾಗು ಮಹಿಳಾ ಸ್ಥಾನಗಳಿಗೆ ಲತಾ ರಮೇಶ್ ಮತ್ತು ಆರ್ ನಾಗವೇಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ೧೪೩ ಮತಗಳು ಚಲಾವಣೆಯಾಗಿದ್ದು, ಈ ಪೈಕಿ ೬ ಮತಗಳು ತಿರಸ್ಕೃತಗೊಂಡವು.
No comments:
Post a Comment