ಫೆ.೨೭, ೨೮ ಎರಡು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ
ಭದ್ರಾವತಿ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
ಭದ್ರಾವತಿ, ಫೆ. ೨೪: ರಾಜ್ಯದಲ್ಲಿ ತನ್ನದೇ ಆದ ವೈಭವದ ಪರಂಪರೆಯನ್ನು ಹೊಂದಿರುವ ಕಬಡ್ಡಿ ಕ್ರೀಡೆಗೆ ಉಕ್ಕಿನ ನಗರವೂ ಸಹ ತವರೂರಾಗಿದ್ದು, ಪುನಃ ವೈಭವದ ಇತಿಹಾಸ ಮರಳಬೇಕು ಹಾಗು ಯುವ ಕ್ರೀಡಾಪಟುಗಳಿಗೆ ಪೋತ್ಸಾಹ ನೀಡಬೇಕೆಂಬ ಉದ್ದೇಶದೊಂದಿಗೆ ತಾಲೂಕು ಮಟ್ಟದ ಎರಡು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಬಿ.ವೈ.ಕೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದೆ ಎಂದು ಕ್ಲಬ್ ಗೌರವಾಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡಾಪಟುಗಳು ಹಾಗು ತರಬೇತಿದಾರರ ಸಹಕಾರದೊಂದಿಗೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ಫೆ.೨೭ ಮತ್ತು ೨೮ರಂದು ಎರಡು ದಿನಗಳ ತಾಲೂಕು ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.
ವಿಜೇತ ತಂಡಗಳಿಗೆ ಮೊದಲ ಬಹುಮಾನ ರು. ೨೫ ಸಾವಿರ, ಎರಡನೇ ಬಹುಮಾನ ರು. ೧೫ ಸಾವಿರ, ಮೂರನೇ ಬಹುಮಾನ ರು. ೧೦ ಸಾವಿರ ಮತ್ತು ಉತ್ತಮ ದಾಳಿಗಾರ, ಹಿಡಿತಗಾರ ಹಾಗು ಆಲ್‌ರೌಂಡರ್ ಆಟಗಾರರಿಗೂ ಸೂಕ್ತ ಬಹುಮಾನಗಳನ್ನು ನೀಡಲಾಗುವುದು ಎಂದರು.
ಹಿರಿಯ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ, ಕ್ಲಬ್ ಅಧ್ಯಕ್ಷ ಎಚ್.ಎನ್ ಕೃಷ್ಣೇಗೌಡ ಮಾತನಾಡಿ, ಪ್ರಪಥಮ ಬಾರಿಗೆ ನಗರದಲ್ಲಿ ಮ್ಯಾಟ್ ಒಳಗೊಂಡ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯುತ್ತಿದೆ. ಪಂದ್ಯಾವಳಿ ೮ ಕಬಡ್ಡಿಗಳನ್ನು ಆಯ್ಕೆ ಮಾಡುವ ಜೊತೆಗೆ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಅನುಮೋದನೆ ಸಹ ಪಡೆಯಲಾಗಿದೆ. ಪ್ರತಿ ತಂಡದ ಖರೀದಿ ಸಹ ನಡೆದಿದ್ದು, ಮಾಲೀಕರ ನೇತೃತ್ವದಲ್ಲಿ ಆಟಗಾರರಿಗೆ ಪ್ರತಿದಿನ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ ಎಂದರು.
ಮಾಜಿ ನಗರಸಭಾ ಸದಸ್ಯ ಬಾಲಕೃಷ್ಣ-ತುಂಗಾ ಟ್ಯಾಕರ್‍ಸ್, ಮಾರುತಿ ಮೆಡಿಕಲ್ಸ್ ಆನಂದ್-ಮಾರುತಿ ಟೈಗರ್‍ಸ್, ಮಾಜಿ ನಗರಸಭಾ ಸದಸ್ಯ ಮಣಿ ಎಎನ್‌ಎಸ್-ಜೋಗ್ ಜಾಗ್ವರ್‍ಸ್, ನ್ಯಾಯವಾದಿ ಮಂಗೋಟೆ ರುದ್ರೇಶ್-ಭದ್ರಾ ಬುಲ್ಸ್, ಪೊಲೀಸ್ ಉಮೇಶ್-ಮಲೆನಾಡು ವಾರಿಯರ್‍ಸ್, ಲೆಕ್ಕ ಪರಿಶೋಧಕ ಜಿ. ಧರ್ಮಪ್ರಸಾದ್-ಸ್ಟೀಲ್‌ಟೌನ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ್-ಎಂಪಿಎಂ ಬುಲ್ಡೇಜರ್‍ಸ್ ಮತ್ತು ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್-ನ್ಯೂಟೌನ್ ಅಟ್ಯಾಕರ್‍ಸ್ ತಂಡಗಳ ಮಾಲೀಕರಾಗಿದ್ದು, ಇವರೆಲ್ಲರ ಸಹಕಾರದಿಂದ ಪಂದ್ಯಾವಳಿ ಇನ್ನಷ್ಟು ಮೆರಗು ಪಡೆದುಕೊಂಡಿದೆ ಎಂದರು.
ಕಬ್ಲ್ ಪ್ರಧಾನ ಕಾರ್ಯದರ್ಶಿ ಎಚ್.ಆರ್ ರಂಗನಾಥ್, ಕಾರ್ಯದರ್ಶಿ ಮಾರ್ಕಂಡಯ್ಯ, ಖಜಾಂಚಿ ಎಸ್. ವಿಶ್ವನಾಥ್, ಉಪಾಧ್ಯಕ್ಷರಾದ ಚನ್ನಪ್ಪ, ಸಂಚಾಲಕರಾದ ಎಸ್.ಎನ್ ಸಿದ್ದಯ್ಯ, ವೈ. ವಸಂತಕುಮಾರ್, ಜಯರಾಮ್, ಮಾರುತಿ ಮೆಡಿಕಲ್ ಆನಂದ್, ಬಾಲಕೃಷ್ಣ, ನಟರಾಜ್, ಯೋಗೀಶ್, ಧನುಷ್ ಬೋಸ್ಲೆ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
No comments:
Post a Comment