ಭದ್ರಾವತಿ, ಮಾ. ೩೦: ಹವ್ಯಾಸಿ ರಂಗ ತಂಡಗಳ ಒಕ್ಕೂಟ ಪ್ರತಿನಿಧಿಸುವ ರಂಗ ಕಲಾವಿದರು ಸಂಘಟನೆ ವತಿಯಿಂದ ಮಾ.೩೧ರಂದು ಸಂಜೆ ೫.೩೦ಕ್ಕೆ ಸಿದ್ದಾರೂಢನಗರದ ಧರ್ಮಶ್ರೀ ಸಭಾಭವನದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಸಹಾಯಕ ನಿರ್ದೇಶಕ ಎಚ್. ಉಮೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಪನ್ಯಾಸಕ ಡಾ. ಸಾಸ್ವೆಹಳ್ಳಿ ಸತೀಶ್, ವಿಕಸಂ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಲಲಿತ ಕಲಾ ಸಂಘದ ಅಧ್ಯಕ್ಷ ಎಚ್.ಬಿ ಉಮೇಶ್‌ರಾವ್, ಮಿತ್ರಕಲಾ ಮಂಡಳಿ ಅಧ್ಯಕ್ಷ ಎ. ಮೈಲಾರಪ್ಪ, ನವೋದಯ ಕಲಾಸಂಘದ ಅಧ್ಯಕ್ಷೆ ಡಾ. ಜಿ.ಎಂ ನಟರಾಜ್, ಶಾಂತಲಾ ಕಲಾವೇದಿಕೆ ಅಧ್ಯಕ್ಷೆ ಯಶೋಧ ವೀರಭದ್ರಪ್ಪ, ಅಪರಂಜಿ ಅಭಿನಯ ಶಾಲೆ ಸಂಸ್ಥಾಪಕ ಅಪರಂಜಿ ಶಿವರಾಜ್, ಹಿರಿಯ ರಂಗ ಕಲಾವಿದ ಕೆ.ಬಿ ಕಪನಿಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
No comments:
Post a Comment