ಭದ್ರಾವತಿ ಸತ್ಯ ಚಿತ್ರಮಂದಿರಕ್ಕೆ ಗುರುವಾರ ಸಂಜೆ ರಾಬರ್ಟ್ ಚಿತ್ರದ ನಾಯಕಿ ಆಶಾಭಟ್ ಕುಟುಂಬ ಸದಸ್ಯರೊಂದಿಗೆ ಆಗಮಿಸಿದರು.
ಭದ್ರಾವತಿ, ಮಾ. ೧೮: ಕಲಾವಿದೆಗೆ ಭಾಷೆಯ ಪರಿವಿಲ್ಲ, ಭದ್ರಾವತಿ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ರಾಬರ್ಟ್ ಚಿತ್ರದ ನಾಯಕಿ ಆಶಾಭಟ್ ಹೇಳಿದರು.
ಅವರು ಗುರುವಾರ ಸಂಜೆ ನಗರದ ಸಿ.ಎನ್ ರಸ್ತೆಯಲ್ಲಿರುವ ಸತ್ಯ ಚಿತ್ರಮಂದಿರಕ್ಕೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ರಾಬರ್ಟ್ ಚಿತ್ರ ವೀಕ್ಷಿಸುವ ಮೂಲಕ ಪತ್ರಕರ್ತರೊಂದಿಗೆ ತಮ್ಮ ಅನುಭವ ಹಂಚಿಕೊಂಡರು.
ನಾನು ಹುಟ್ಟಿಬೆಳೆದ ಊರು ಭದ್ರಾವತಿ. ನಾನು ವಿಶ್ವ ಸುಂದರಿ ಸ್ಪರ್ಧೆಯಲ್ಲೂ ಸಹ ಭದ್ರಾವತಿ ಹೆಸರನ್ನು ಹೇಳಿಕೊಂಡಿದ್ದೇನೆ. ಭದ್ರಾವತಿ ಎಂದರೆ ಹೆಮ್ಮೆ ಈಗಲೂ ಸಹ ಎಲ್ಲೆಡೆ ನನ್ನೂರು ಭದ್ರಾವತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ ಎಂದರು.
ಕಲಾವಿದೆಗೆ ಭಾಷೆಯ ಪರಿವಿಲ್ಲ. ನನಗೆ ಕನ್ನಡ ಹಾಗು ಕನ್ನಡಿಗರ ಬಗ್ಗೆ ಅಭಿಮಾನವಿದೆ. ರಾಬರ್ಟ್ ಚಿತ್ರ ತುಂಬಾ ಚನ್ನಾಗಿ ಮೂಡಿ ಬಂದಿದೆ. ಈ ಚಿತ್ರ ವೀಕ್ಷಿಸಿದವರಿಗೆ ಇದರ ಅರಿವಾಗುತ್ತದೆ. ಒಂದು ಚಿತ್ರ ನಿರ್ಮಾಣದ ಹಿಂದೆ ನೂರಾರು ಜನರ ಪರಿಶ್ರಮವಿದೆ. ಎಲ್ಲರೂ ಒಗ್ಗಟ್ಟಾಗಿ, ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ನನಗೆ ಈ ಚಿತ್ರದ ಮೂಲಕ ಉತ್ತಮ ಭವಿಷ್ಯವಿದೆ ಎಂದರು.
ತಂದೆ-ತಾಯಿ ಕುಟುಂಬ ಸದಸ್ಯರೊಂದಿಗೆ ಚಿತ್ರ ವೀಕ್ಷಣೆ:
ಸತ್ಯ ಚಿತ್ರಮಂದಿರದಲ್ಲಿ ೬ ಗಂಟೆಗೆ ಆರಂಭಗೊಂಡ ರಾಬರ್ಟ್ ಚಿತ್ರ ಪ್ರದರ್ಶನವನ್ನು ತಂದೆ ಸುಬ್ರಮಣ್ಯ ಭಟ್, ತಾಯಿ ಶ್ಯಾಮಲ ಭಟ್ ಹಾಗು ಕುಟುಂಬ ಸದಸ್ಯರ ಜೊತೆ ವೀಕ್ಷಿಸಿ ಸಂಭ್ರಮಿಸಿದರು.
ಜನ್ಮದಿನ ಆಚರಣೆ:
ಚಿತ್ರ ಮಂದಿರ ಮಾಲೀಕ ದುಷ್ಯಂತ್‌ರಾಜ್ ಪುತ್ರನ ಜನ್ಮದಿನದ ಅಂಗವಾಗಿ ಚಿತ್ರಮಂದಿರದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ನಟಿ ಆಶಾಭಟ್ ಹಾಗು ಕುಟುಂಬ ವರ್ಗದವರು ಭಾಗಿಯಾಗಿ ಶುಭಕೋರಿದರು.
ಚಿತ್ರ ಮಂದಿರ ಮಾಲೀಕ ದುಷ್ಯಂತ್‌ರಾಜ್ ಪುತ್ರನ ಜನ್ಮದಿನದ ಅಂಗವಾಗಿ ಚಿತ್ರಮಂದಿರದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ನಟಿ ಆಶಾಭಟ್ ಹಾಗು ಕುಟುಂಬ ವರ್ಗದವರು ಭಾಗಿಯಾಗಿ ಶುಭಕೋರಿದರು.
No comments:
Post a Comment