ಭದ್ರಾವತಿ, ಮಾ. ೨೫: ತಾಲೂಕಿನ ನವಿಲೆಬಸವಾಪುರ ಗ್ರಾಮದ ಶ್ರೀ ಬಸವಣ್ಣ ದೇವರ ಜಾತ್ರಾ ಮಹೋತ್ಸವ ಮಾ.೨೯ರವರೆಗೆ ನಡೆಯುತ್ತಿದ್ದು, ಕೋವಿಡ್-೧೯ರ ಹಿನ್ನಲೆಯಲ್ಲಿ ಹೆಚ್ಚಿನ ಜನಸಂದಣಿ ಸೇರದಂತೆ ಎಚ್ಚರವಹಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸದಿರುವಂತೆ ಕೋರಲಾಗಿದೆ.
ಜಾತ್ರಾ ದಿನಗಳಂದು ಯಾವುದೇ ತೀರ್ಥಪ್ರಸಾದ ವಿನಿಯೋಗವಿರುವುದಿಲ್ಲ. ಹಿಂದಿನ ವರ್ಷದಂತೆ ಈ ಬಾರಿ ಸಹ ಅನ್ನಸಂತರ್ಪಣೆ ಇರುವುದಿಲ್ಲ. ಬೇರೆ ಬೇರೆ ಗ್ರಾಮ, ತಾಲೂಕು ಹಾಗು ಜಿಲ್ಲೆಗಳಿಂದ ಆಗಮಿಸುವ ಭಕ್ತಾಧಿಗಳು ಈ ಬಾರಿ ಸಹ ಆಗಮಿಸದಿರುವಂತೆ ಮುಜರಾಯಿ ಅಧಿಕಾರಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಕೋರಿದ್ದಾರೆ.
No comments:
Post a Comment