ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಪೊಲೀಸ್ ಉಮೇಶ್ ನೇತೃತ್ವದ ಭದ್ರಾವತಿ ಸ್ನೆಹ ಜೀವಿ ಬಳಗದ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಏ. ೫: ಯಾವುದೇ ಆಸೆ, ಆಕಾಂಕ್ಷೆಗಳಿಲ್ಲದೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಉದಯಿಸಿದ ಸ್ನೇಹಜೀವಿ ಬಳಗ ಇಂದು ಬೃಹತ್‌ದಾಗಿ ಬೆಳೆದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಬಳಗದ ಸಂಸ್ಥಾಪಕ ಪೊಲೀಸ್ ಉಮೇಶ್ ತಿಳಿಸಿದರು.
ಅವರು ಬಳಗಕ್ಕೆ ಸೇರ್ಪಡೆ ಹಾಗು ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ಬಳಗದ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭದ ನೇತೃತ್ವವಹಿಸಿ ಮಾತನಾಡಿದರು.
ದೇವಸ್ಥಾನಗಳಲ್ಲಿ ಅನ್ನದಾಸೋಹದಂತಹ ಸೇವಾ ಕಾರ್ಯಗಳನ್ನು ಆಯೋಜಿಸಿಕೊಂಡು ಬರುತ್ತಿದ್ದ ಬಳಗ ನಂತರದ ದಿನಗಳಲ್ಲಿ ಹಲವು ರೀತಿಯ ಸೇವಾಗಳನ್ನು ಮೈಗೂಡಿಸಿಕೊಂಡಿದೆ. ಪ್ರಮುಖವಾಗಿ ಬಡವರ ತುರ್ತು ಆರೋಗ್ಯ ಸೇವೆಗಾಗಿ ಆಂಬ್ಯುಲೆನ್ಸ್ ವ್ಯವಸ್ಥೆ, ಕೋವಿಡ್-೧೯ರ ಸಂದರ್ಭದಲ್ಲಿ ನಿಗರ್ತಿಕರು, ಕಡು ಬಡವರಿಗೆ ಆಹಾರ ಮತ್ತು ದವಸ ಧಾನ್ಯ ವಿತರಣೆ, ಧಾರ್ಮಿಕ ಕಾರ್ಯಗಳಿಗೆ ನೆರವು ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಇದೀಗ ಬಳಗದ ಸದಸ್ಯರು ಸೇವಾ ಮನೋಭಾವನೆಯೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸ್ಪರ್ಧಿಸಿ ಗೆಲವು ಸಾಧಿಸಿದ್ದಾರೆ ಎಂದರು.
ಬಳಗದಲ್ಲಿ ಯಾವುದೇ ಪಕ್ಷದ, ಜಾತಿಭೇದವಿಲ್ಲ. ಎಲ್ಲರಿಗೂ ಸೇವೆ ಮಾಡಲು ಅವಕಾಶವಿದೆ. ಸೇವಾ ಮನೋಭಾವನೆ ಹೊಂದಿರುವವರು ಬಳಗಕ್ಕೆ ಸೇರ್ಪಡೆಗೊಳ್ಳಬಹುದು. ಪ್ರಸ್ತುತ ನಗರಸಭೆಗೆ ನಡೆಯುತ್ತಿರುವ ಚುನಾವಣೆಗೂ ಬಳಗದ ಸದಸ್ಯರು ಸ್ಪರ್ಧಿಸಲಿದ್ದಾರೆ. ಕೆಲವೇ ದಿನಗಳಲ್ಲಿ ಹೆಸರುಗಳನ್ನು ಪ್ರಕಟಿಸಲಾಗುವುದು ಎಂದರು.
ಪ್ರಮುಖರಾದ ಮುಳ್ಕೆರೆ ಲೋಕೇಶ್, ವಿನೋದ್, ಪ್ರದೀಪ್‌ಕುಮಾರ್, ಕಾಂತ ದಿನೇಶ್ ಸೇರಿದಂತೆ ಇನ್ನಿತರರು ಬಳಗಕ್ಕೆ ಸೇರ್ಪಡೆಗೊಂಡರು.
ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಗದ ನಂದಿನಿ ಬಾಯಿ, ಲಕ್ಷ್ಮಮ್ಮ, ಮಂಜುಳ, ಕೆ.ವಿ ಧನಂಜಯ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಬಳಗದ ಸತೀಶ್‌ಗೌಡ, ಮೇಘರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment