ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಹಜ್ರತ್ ಸೈಯದ್ ಸಾದತ್ ಷಾ ಖಾದ್ರಿ ದರ್ಗಾ ಕಮಿಟಿ ವತಿಯಿಂದ ಶನಿವಾರದ ವರೆಗೆ ಸಂದಲ್ ಮತ್ತು ಉರುಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಅಂಗವಾಗಿ ಮುಸ್ಲಿಂ ಸಮುದಾಯದ ಪ್ರಮುಖರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಏ. ೩: ನಗರದ ತರೀಕೆರೆ ರಸ್ತೆಯಲ್ಲಿರುವ ಹಜ್ರತ್ ಸೈಯದ್ ಸಾದತ್ ಷಾ ಖಾದ್ರಿ ದರ್ಗಾ ಕಮಿಟಿ ವತಿಯಿಂದ ಶನಿವಾರದ ವರೆಗೆ ಸಂದಲ್ ಮತ್ತು ಉರುಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂದಲ್ ಅಂಗವಾಗಿ ತರೀಕೆರೆ ರಸ್ತೆ ಯಾಕಿನ್ ಷಾ ವಲೀ ದರ್ಗಾಕ್ಕೆ ಹೂವಿನ ಹೊದಿಕೆ ಹೊದಿಸಿ, ನಂತರ ಗಂದಕ ಕುಡಿಕೆಯೊಂದಿಗೆ ಮೆರವಣಿಗೆ ನಡೆಸಲಾಯಿತು. ಮಾಧವಚಾರ್ ವೃತ್ತದ ಮೂಲಕ ಎನ್‌ಎಸ್‌ಟಿ ರಸ್ತೆಯಲ್ಲಿ ಸಾಗಿ ಮೊಹಲ್ಲಾ ಚಮನ್ ಷಾ ವಲೀ ದರ್ಗಾ, ಉರ್ದು ಶಾಲೆಯ ಹಿಂಭಾಗದಲ್ಲಿರುವ ಹೈದರ್ ಮಸ್ತಾನ್ ದರ್ಗಾ, ಜಂಡೇಕಟ್ಟೆ ಮೂಲಕ ಜಾಮಿಯಾ ಮಸೀದಿ, ಕಂಚಿನಬಾಗಿಲು ವೃತ್ತದ ಬಳಿ ಶಕ್ಕರ್ ಗಂಜ್ ದರ್ಗಾ, ಕೋಟೆ ರಸ್ತೆ ಮುಖಾಂತರ ರಂಗಪ್ಪ ವೃತ್ತ ತಲುಪಿ ನಂತರ ಪುನಃ ತರೀಕೆರೆ ರಸ್ತೆಯ ಸಾದತ್ ದರ್ಗಾ ತಲುಪಿತು.
ಮಕ್ಕಳ ನಾತ್ ಮತ್ತು ಬುರ್ದಾ ಷರೀಫ್ ಹಾಗೂ ಧರ್ಮಗುರುಗಳಿಂದ ಹಿತವಚನ ನಡೆಯಿತು. ಮುಸ್ಲಿಂ ಸಮುದಾಯದ ಮುಖಂಡರು, ಗಣ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಶನಿವಾರ ಸುಮಾರು ೪೦ಕ್ಕೂ ಹೆಚ್ಚು ಮಕ್ಕಳ ಮುಂಜಿ ಹಾಗು ೫ ಜೊತೆಗೆ ಸಮೂಹಿಕ ವಿವಾಹ ಹಾಗು ಕವಾಲಿ ಕಾರ್ಯಕ್ರಮಗಳು ಜರುಗಿದವು.
ಕಮಿಟಿ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗು ಮುಸ್ಲಿಂ ಸಮುದಾಯದ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment