ರತ್ನಮ್ಮ
ಭದ್ರಾವತಿ, ಮೇ. ೧೧: ಹಳೇನಗರದ ಹವನ ಪತ್ರಿಕೆ ಸಂಪಾದಕ ದಿವಂಗತ ಕೆ.ಎನ್ ಶ್ರೀನಿವಾಸ್‌ಮೂರ್ತಿಯವರ ಪತ್ನಿ ರತ್ನಮ್ಮ(೮೫) ಮಂಗಳವಾರ ನಿಧನ ಹೊಂದಿದರು.
ಓರ್ವ ಪುತ್ರ, ಮೂವರು ಪುತ್ರಿಯರನ್ನು ಹೊಂದಿದ್ದರು. ರತ್ನಮ್ಮ ಹಳೇನಗರದ ಮಹಿಳಾ ಸೇವಾ ಸಮಾಜದ ಸಂಸ್ಥಾಪಕರಾಗಿದ್ದು, ಅಲ್ಲದೆ ಪತಂಜಲಿ ಯೋಗ ಸಮಿತಿಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಇವರ ನಿಧನಕ್ಕೆ ಹಳೇನಗರದ ಮಹಿಳಾ ಸೇವಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಬ್ರಾಹ್ಮಣ ಮಹಾಸಭಾ, ಕರಾವಳಿ ವಿಪ್ರ ಬಳಗ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.
No comments:
Post a Comment