ಭದ್ರಾವತಿ, ಸೆ. ೧೪: ಲಯನ್ಸ್ ಕ್ಲಬ್ ವತಿಯಿಂದ ಸೆ.೧೫ರಂದು ಸಂಜೆ ೬.೩೦ಕ್ಕೆ ನ್ಯೂಟೌನ್ ಉಂಬ್ಳೆಬೈಲು ರಸ್ತೆಯಲ್ಲಿರುವ ಕ್ಲಬ್ ಸಭಾಂಗಣದಲ್ಲಿ ಶಿಕ್ಷಕರ ಹಾಗು ತಂತ್ರಜ್ಞರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಕ್ಲಬ್ ಜಿಲ್ಲಾ ವಲಯಾಧಿಕಾರಿಗಳಾದ ಎ.ಎಸ್ ಕುಮಾರಸ್ವಾಮಿ, ಹೆಬ್ಬಂಡಿ ನಾಗರಾಜ್, ಮಾಜಿ ಗೌರ್‍ನರ್‌ಗಳಾದ ಬಿ. ದಿವಾಕರ ಶೆಟ್ಟಿ, ಕೆ.ಸಿ ವೀರಭದ್ರಪ್ಪ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕ್ಲಬ್ ಅಧ್ಯಕ್ಷ ಬಿ.ಎಸ್ ಮಹೇಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಅನಿತಾ ಮೇರಿ ಮತ್ತು ವಿರೂಪಾಕ್ಷಪ್ಪ ಹಿರೇಮಠ, ನಿವೃತ್ತ ತಂತ್ರಜ್ಞರಾದ ಆಲ್ವಿನ್ ಡಿಸೋಜಾ ಮತ್ತು ಮೂಡಲಗಿರಿಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಅಲ್ಲದೆ ಕ್ಲಬ್ ವಲಯ ಸಲಹಾ ಸಮಿತಿ ಸಭೆ ಸಹ ನಡೆಯಲಿದ್ದು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.
No comments:
Post a Comment