Saturday, October 9, 2021

ಅ.೧೪ರಂದು ಹೊಸನಂಜಾಪುರದಲ್ಲಿ ಬೌದ್ಧ ವಿಹಾರ/ಮಂದಿರ ನಿರ್ಮಾಣಕ್ಕೆ ಅಡಿಗಲ್ಲು : ಪ್ರೊ. ರಾಚಪ್ಪ

ಅ.೧೪ರಂದು ಬೆಳಿಗ್ಗೆ ೧೦.೩೦ಕ್ಕೆ ಭದ್ರಾವತಿ ನಗರದ ಬೊಮ್ಮನಕಟ್ಟೆ ರಸ್ತೆಯ ಹೊಸನಂಜಾಪುರದಲ್ಲಿ ಬೌದ್ಧ ವಿಹಾರ/ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಪ್ರೊ. ರಾಚಪ್ಪ ತಿಳಿಸಿದರು.
    ಭದ್ರಾವತಿ, ಅ. ೯: ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ವತಿಯಿಂದ ಬುದ್ಧ ಶಕೆ ೨೫೬೫, ಭೀಮಶಕೆ ೧೩೦ನೇ ವರ್ಷದ ಅಂಗವಾಗಿ ಭಗವಾನ್ ಬುದ್ಧ ಹಾಗು ಡಾ. ಬಿ.ಆರ್ ಅಂಬೇಡ್ಕರ್ ಸ್ಮರಣಾರ್ಥ ಅ.೧೪ರಂದು ಬೆಳಿಗ್ಗೆ ೧೦.೩೦ಕ್ಕೆ  ನಗರದ ಬೊಮ್ಮನಕಟ್ಟೆ ರಸ್ತೆಯ ಹೊಸನಂಜಾಪುರದಲ್ಲಿ ಬೌದ್ಧ ವಿಹಾರ/ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಪ್ರೊ. ರಾಚಪ್ಪ ತಿಳಿಸಿದರು.
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೊಂದು ವಿಶೇಷ ಕಾರ್ಯಕ್ರಮವಾಗಿದೆ. ಭಗವಾನ್ ಬುದ್ಧನ ಭವ್ಯ ಪರಂಪರೆ, ಭಾರತ ದೇಶದ ಇತಿಹಾಸ, ಸ್ವಾತಂತ್ರ್ಯದ ಹೋರಾಟಗಳು, ಮಹಾನ್ ವ್ಯಕ್ತಿಗಳ ಸ್ಮರಣೆ ಎಲ್ಲವೂ ಈ ಸಮಾರಂಭದಲ್ಲಿ ಅನಾವರಣಗೊಳ್ಳಲಿವೆ ಎಂದರು.
    ಕೊಳ್ಳೇಗಾಲ ಚೇತವನ ಬುದ್ಧ ವಿಹಾರದ ಸುಗತಪಾಲ ಭಂತೇಜಿ, ಧಮ್ಮಾಚಾರಿಗಳಾದ ಚಾಂದಿಮಾ, ಲಕ್ಷ್ಮಣ್ ಮತ್ತು ಸಂಘಪಾಲೋ ಅವರು ದಿವ್ಯ ಸಾನಿಧ್ಯ ವಹಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸಮಾರಂಭ ಉದ್ಘಾಟಿಸುವರು. ಟ್ರಸ್ಟ್ ಅಧ್ಯಕ್ಷ ಪ್ರೊ. ರಾಚಪ್ಪ ಅಧ್ಯಕ್ಷತೆ ವಹಿಸಲಿದ್ದು, ದಲಿತ ಮುಖಂಡರಾದ ಸತ್ಯ, ಡಿ. ನರಸಿಂಹಮೂರ್ತಿ, ಸುರೇಶ್, ಎನ್. ಶ್ರೀನಿವಾಸ್, ಮೈಲಾರಪ್ಪ, ಶಿವಗಂಗಾ, ಟ್ರಸ್ಟ್ ಉಪಾಧ್ಯಕ್ಷ ಬಿ.ಡಿ ಸಾವಕ್ಕನವರ್, ಕಾರ್ಯದರ್ಶಿ ಶ್ರೀನಿವಾಸ್, ನಗರಸಭಾ ಸದಸ್ಯರಾದ ಚನ್ನಪ್ಪ, ಉದಯಕುಮಾರ್, ಬಿ.ಪಿ ಸರ್ವಮಂಗಳ ಭೈರಪ್ಪ, ಪ್ರೇಮಾ ಬದರಿನಾರಾಯಣ, ಗ್ರಾಮ ಪಂಚಾಯಿತಿ ಸದಸ್ಯ ಕಿರಣ್‌ರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
    ದಲಿತ ಮುಖಂಡ ಸತ್ಯ ಮಾತನಾಡಿ, ಭಗವಾನ್ ಬುದ್ಧ ಹಾಗು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳು ಎಲ್ಲೆಡೆ ವಿಸ್ತಾರಗೊಳ್ಳಗೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರದೊಂದಿಗೆ ಬೌದ್ಧ ವಿಹಾರ ನಿರ್ಮಾಣವಾಗುತ್ತಿದೆ. ಇಂತಹ ಮಹಾನ್ ಕಾರ್ಯ ಯಶಸ್ವಿಯಾಗಲು ಕೈಜೋಡಿಸಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಮುಖಂಡ ಸುರೇಶ್ ಮಾತನಾಡಿ, ಬೌದ್ಧ ವಿಹಾರ ನಿರ್ಮಾಣದೊಂದಿಗೆ ಹೊಸ ಯುಗ ಆರಂಭಗೊಳ್ಳುವ ಲಕ್ಷಣಗಳು ಎದ್ದುಕಾಣುತ್ತಿದೆ. ಭವಿಷ್ಯದಲ್ಲಿ ನಾವೆಲ್ಲರೂ ಬುಧ್ದ ಹಾಗು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುವಂತಾಗಬೇಕಾಗಿದೆ ಎಂದರು.
    ಬೌದ್ಧ ವಿಹಾರ ನಿರ್ಮಾಣಕ್ಕೆ ಸ್ವಂತ ಜಮೀನಿನ ಜಾಗವನ್ನು ದಾನ ಮಾಡಿರುವ ಟ್ರಸ್ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ, ಬಹಳ ವರ್ಷಗಳಿಂದ ಬೌದ್ಧ ವಿಹಾರ ನಿರ್ಮಾಣ ಮಾಡಬೇಕೆಂಬ ಬಯಕೆ ಹೊಂದಿದ್ದು, ಇದೀಗ ಸಾಕಾರಗೊಳ್ಳುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
    ದಲಿತ ಮುಖಂಡ ಚಿನ್ನಯ್ಯ, ಶಿಕ್ಷಕ ಎ. ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

1 comment:

  1. ನಮೋ ತಸ್ಸ ಭಗವತೋ ಅರಹತೋ ಸಮ್ಮಾ ಸಂಬುದ್ಧಸ್ಸಾ ಬಂದು ಹೋದ ಮಾಧ್ಯಮ ಬುದ್ಧ ರಿಗೂ ಪ್ರಚಲಿತದಲ್ಲಿರುವ ಮಾಧ್ಯಮ ಬುದ್ಧ ರಿಗೂ ಮುಂದೆ ಬರಲಿ ರುವ ಮಾಧ್ಯಮ ಬುದ್ಧ ರಿಗೂ ಬುದ್ಧ ಧಮ್ಮ ಸಂಘ ವಂದಾಮಿ ಸಾಧು ಸಾಧು ಸಾಧು ಕಾಯ ವಾಚ ಮನಸಾ ಭೌದ್ಧ ಧಮ್ಮಾಚರಿ ಸಂಘಪಾಲೊ ದುಃಖ ನುಡಿದರೆ ಪ್ರಚಲಿತದಲ್ಲಿರುವ ಮಾಧ್ಯಮ ಬುದ್ಧ ರು ಖಮತಮೇ ಬಾಬಾ ಸಾಹೇಬ್ ಭೀಮ್ ರಾವ್ ರಾಮಜಿ ಅಂಬೇಡ್ಕರ್ ರವರ ಕನಸು ಸರ್ವಾಂಗ ಸುಂದರ ಭಾರತದ ಭೌದ್ಧ ಮಯ ಆಗೋಕೆ ತಮ್ಮ ಸೇವೆ ಮಂಗಳಕರವಾಗಿದೆ ಸಾಧು ಸಾಧು ಸಾಧು

    ReplyDelete