ಅಭಿಮಾನಿಗಳು, ಸಂಘಟನೆಗಳಿಂದ ಸುಮಾರು ೧೦೦೦ ಮಂದಿಗೆ ಮಾಂಸಾಹಾರ ವಿತರಣೆ
ಭದ್ರಾವತಿ ತಾಲೂಕು ಪಂಚಾಯಿತಿ ಕಛೇರಿ ಸಮೀಪದ ಕನಕ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು, ಹಿತೈಷಿಗಳು, ಸ್ಥಳೀಯರು ಮಂಗಳವಾರ ಪುನೀತ್‌ರಾಜ್‌ಕುಮಾರ್ ಅವರ ೧೨ನೇ ದಿನದ ಪುಣ್ಯ ಸ್ಮರಣೆಯನ್ನು ಹಲವು ಕಾರ್ಯಕ್ರಮಗಳೊಂದಿಗೆ ನೆರವೇರಿಸಿದರು.
ಭದ್ರಾವತಿ, ನ. ೯: ಚಲನ ಚಿತ್ರ, ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಅವರ ೧೨ನೇ ದಿನದ ಪುಣ್ಯ ಸ್ಮರಣೆ ಅಂಗವಾಗಿ ಮಂಗಳವಾರ ನಗರದ ವಿವಿಧೆಡೆ ಅಭಿಮಾನಿಗಳು ಹಾಗು ವಿವಿಧ ಸಂಘಟನೆಗಳಿಂದ ಅನ್ನಸಂತರ್ಪಣೆ ಯಶಸ್ವಿಯಾಗಿ ನೆರವೇರಿತು.
ಕನಕ ಆಟೋ ನಿಲ್ದಾಣ :
ನಗರದ ತಾಲೂಕು ಪಂಚಾಯಿತಿ ಕಛೇರಿ ಸಮೀಪದ ಕನಕ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು, ಹಿತೈಷಿಗಳು, ಸ್ಥಳೀಯರು ಪುಣ್ಯ ಸ್ಮರಣೆಯನ್ನು ಹಲವು ಕಾರ್ಯಕ್ರಮಗಳೊಂದಿಗೆ ನೆರವೇರಿಸಿದರು.
ಸುಮಾರು ೧೦೦೦ ಮಂದಿಗೆ ಮಾಂಸಹಾರ ವಿತರಣೆ, ಸ್ವರ ಸಂಗೀತ ಹಾಗು ಪುಷ್ಪನಮನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.
ಅಭಿಮಾನಿಗಳು, ಹಿತೈಷಿಗಳು ಹಾಗು ಸ್ಥಳೀಯರ ಸಹಕಾರದಿಂದ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಇದುವರೆಗೂ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಎರಡು ಕಾರ್ಯಕ್ರಮಗಳು ಸಹ ಯಶಸ್ವಿಗೊಂಡಿವೆ. ಪುನೀತ್ ರಾಜ್‌ಕುಮಾರ್ ಅವರ ಆಶಯದಂತೆ ನೇತ್ರದಾನ ನೋಂದಾಣಿ ಕಾರ್ಯಕ್ರಮ ಸಹ ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದು ಕನಕ ಆಟೋ ಚಾಲಕರ ಸಂಘದ ಅಧ್ಯಕ್ಷ ಸುರೇಶ್ ತಿಳಿಸಿದರು.
ಹೊಸ ಸೀಗೆಬಾಗಿ ಅಂಬೇಡ್ಕರ್ ವೃತ್ತ :
ನಗರಸಭೆ ವ್ಯಾಪ್ತಿಯ ಹೊಸ ಸೀಗೆಬಾಗಿ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಯುವಕರ ಸಂಘ, ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳು ಹಾಗು ಸ್ಥಳೀಯರು ಶ್ರೀನಿಧಿ ಎಂಟರ್ ಪ್ರೈಸಸ್ ಮಾಲೀಕ ವಿನಯ್ ಹಾಗು ಶಿವಕುಮಾರ್ ನೇತೃತ್ವದಲ್ಲಿ ೧೨ನೇ ದಿನದ ಪುಣ್ಯಸ್ಮರಣೆಯನ್ನು ಯಶಸ್ವಿಯಾಗಿ ನೆರವೇರಿಸಿದರು.
ಇಲ್ಲೂ ಸಹ ಸಾವಿರ ಮಂದಿಗೆ ಮಾಂಸಹಾರ ವಿತರಣೆ ನಡೆಯಿತು. ಅಭಿಮಾನಿಗಳು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುನೀತ್‌ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಿದರು.
ಶ್ರೀನಿಧಿ ಎಂಟರ್ ಪ್ರೈಸಸ್ ಮಾಲೀಕ, ಪುನೀತ್‌ರಾಜ್‌ಕುಮಾರ್ ಅಭಿಮಾನಿ ವಿನಯ್ ಮಾತನಾಡಿ, ಪುನೀತ್‌ರಾಜ್ ಕುಮಾರ್ ಅವರ ಸೇವಾ ಕಾರ್ಯಗಳು ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಿವೆ. ಮುಂದಿನ ದಿನಗಳಗಳಲ್ಲಿ ಅವರ ದಾರಿಯಲ್ಲಿ ನಾವೆಲ್ಲರೂ ಮುನ್ನಡೆಯುತ್ತೇವೆ ಎಂದರು.
ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸ ಸೀಗೆಬಾಗಿ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಯುವಕರ ಸಂಘ, ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳು ಹಾಗು ಸ್ಥಳೀಯರು ಶ್ರೀನಿಧಿ ಎಂಟರ್ ಪ್ರೈಸಸ್ ಮಾಲೀಕ ವಿನಯ್ ಹಾಗು ಶಿವಕುಮಾರ್ ನೇತೃತ್ವದಲ್ಲಿ ೧೨ನೇ ದಿನದ ಪುಣ್ಯಸ್ಮರಣೆಯನ್ನು ಯಶಸ್ವಿಯಾಗಿ ನೆರವೇರಿಸಿದರು.
No comments:
Post a Comment