ಭದ್ರಾವತಿ, ಡಿ. ೨೦ : ಉಕ್ಕು ವಲಯಕ್ಕೆ ನೀಡುವ ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಎನ್ವಿರಾನ್ಮೆಂಟ್ ಮ್ಯಾನೇಜ್‌ಮೆಂಟ್ ಪ್ರಶಸ್ತಿಯನ್ನು ಈ ಬಾರಿ ಸಹ ಭಾರತೀಯ ಉಕ್ಕು ಪ್ರಾಧಿಕಾರ (ಸೈಲ್) ಪಡೆದುಕೊಂಡಿದೆ.
ಸತತವಾಗಿ ೩ ವರ್ಷಗಳಿಂದ ಈ ಪ್ರಶಸ್ತಿಯನ್ನು ಸೈಲ್ ತನ್ನದಾಗಿಸಿಕೊಂಡು ಬಂದಿದೆ. ಸುಸ್ಥಿರ ಮತ್ತು ಜವಾಬ್ದಾರಿಯುತ ಪರಿಸರ ಉಕ್ಕಿನ ತಯಾರಿಕೆಗಾಗಿ ಕಂಪನಿಯು ಮಾಡಿದ ಪ್ರಯತ್ನಗಳಿಗೆ ಈ ಪ್ರಶಸ್ತಿ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು.
ಹವಾಮಾನ ಬದಲಾವಣೆಯ ಬಗೆಯಿರುವ ಜಾಗತಿಕ ಕಾಳಜಿಗೆ ಸೈಲ್ ಸಂವೇದನಾಶೀಲವಾಗಿದೆ. ಕಾರ್ಬನ್ ಹೆಜ್ಜೆ ಗುರುತಿನ ಕಡಿತವು ಕಂಪನಿಯ ಕಾರ್ಪೊರೇಟ್ ನೀತಿಗಳು ಮತ್ತು ಕಾರ್ಯಾಚರಣೆಗಳ ಅವಿಭಾಜ್ಯ ಅಂಗವಾಗಿದೆ. ಅತ್ಯಾಧುನಿಕ ಪರಿಸರ ಸ್ನೇಹಿ ತಂತ್ರಜ್ಞಾನದ ನಿಯೋಜನೆ, ಸಂಪನ್ಮೂಲ ದಕ್ಷತೆಗಾಗಿ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಆರ್ ಮತ್ತು ಡಿ ಉಪಕ್ರಮಗಳು, ಬೃಹತ್ ಪ್ರಮಾಣದಲ್ಲಿ ಸಸಿಗಳನ್ನು ನೆಡುವ ಮೂಲಕ ಕಾರ್ಬನ್ ಸಿಂಕ್‌ಗಳ ರಚನೆ, ಎಲ್.ಇ.ಡಿ ದೀಪಗಳಿಗೆ ಕ್ರಮೇಣ ಬದಲಾವಣೆ, ನವೀಕರಿಸಬಹುದಾದ ಇಂಧನಗಳ ಪಾಲನ್ನು ಹೆಚ್ಚಿಸುವುದು ಸೇರಿದಂತೆ ಇತ್ಯಾದಿ ಪ್ರಮುಖ ಉಪಕ್ರಮಗಳನ್ನು ಸೈಲ್ ರೂಪಿಸಿಕೊಂಡಿದೆ.
ಮಾಲಿನ್ಯ ನಿಯಂತ್ರಣ ಸೌಲಭ್ಯಗಳನ್ನು ನವೀಕರಿಸುವುದು, ಶೂನ್ಯ ದ್ರವ ವಿಸರ್ಜನೆಯನ್ನು ಸಾಧಿಸುವ ಗುರಿಯೊಂದಿಗೆ ನೀರಿನ ಸಂರಕ್ಷಣೆಯ ಪ್ರಯತ್ನಗಳು ಕಂಪನಿಯ ಪರಿಸರ ಸಂರಕ್ಷಣಾ ಕ್ರಮಗಳಾಗಿವೆ. ವಿವಿಧ ಘನತಾಜ್ಯಗಳ ಸಮರ್ಥ ನಿರ್ವಹಣೆ (ಅಂದರೆ ಪ್ರಕ್ರಿಯೆ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ, ಕ್ಯಾಂಟೀನ್/ ನಗರಪ್ರದೇಶದ ತ್ಯಾಜ್ಯ) ಸೇರಿದಂತೆ ವಿವಿಧ ಪರಿಸರ ಸಂರಕ್ಷಣ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಮೇಲೆ ಕೇಂದ್ರೀಕೃತವಾಗಿವೆ. ಅರಣ್ಯೀಕರಣದ ಮೂಲಕ ಇಂಗಾಲದ ವಶಪಡಿಸಿಕೊಳ್ಳುವಿಕೆ, ಗಣಿಗಾರಿಕೆಯಿಂದ ಹೊರಗಿರುವ ಪ್ರದೇಶದ ಪರಿಸರ ಮರುಸ್ಥಾಪನೆ ಇತ್ಯಾದಿ ಗುರಿ ಹೊಂದಿದೆ.
ಇತ್ತೀಚೆಗೆ ನಡೆದ ವರ್ಚುಯಲ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸೈಲ್ ಸ್ವೀಕರಿಸಿದೆ. ಸತತವಾಗಿ ೩ ಬಾರಿ ಪ್ರಶಸ್ತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಸೈಲ್ ಆಡಳಿತ ಮಂಡಳಿಗೆ ನಗರ ವಿಐಎಸ್‌ಎಲ್ ಕಾರ್ಖಾನೆಯ ಸಮುದಾಯ ಅಭಿನಂದನೆ ಸಲ್ಲಿಸಿದೆ.
No comments:
Post a Comment