ಎ.ಎನ್ ನಟರಾಜ್
ಭದ್ರಾವತಿ. ಡಿ, ೮ : ಹಳೇನಗರದ ಶ್ರೀ ಕನ್ಯಕಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾಗಿ ಎ.ಎನ್ ನಟರಾಜ್ ಮತ್ತು ಕೆ.ವಿ ಹರೀಶ್ ಬಾಬು ಆಯ್ಕೆಯಾಗಿದ್ದಾರೆ.
ಸಂಘದಲ್ಲಿ ತೆರವಾಗಿದ್ದ ಎರಡು ನಿರ್ದೇಶಕ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆದು ಇಬ್ಬರು ಹೆಚ್ಚಿನ ಮತಗಳೊಂದಿಗೆ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ. ಪ್ರಕಾಶ್ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಿದರು. ಒಟ್ಟು ೩೫೫ ಮತದಾರರಲ್ಲಿ ೨೬೨ ಮತ ಚಲಾವಣೆಯಾಗಿದ್ದು, ಈ ಪೈಕಿ ೩೫ ಮತಗಳು ಅಸಿಂಧುಗೊಂಡಿವೆ.
ಕೆ.ವಿ ಹರೀಶ್ ಬಾಬು
No comments:
Post a Comment