ಭದ್ರಾವತಿ ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ದಿ ಹಂಗರ್ ಪ್ರಾಜೆಕ್ಟ್, ಕರ್ನಾಟಕ ಮತ್ತು ತರೀಕೆರೆ, ವಿಕಸನ ಸಂಸ್ಥೆ ನೇತೃತ್ವದಲ್ಲಿ ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಚುನಾವಣೆ ನಡೆದು ನೂತನ ಪದಾಧಿಕಾರಿಗಳು ಆಯ್ಕೆಯಾದರು.
ಭದ್ರಾವತಿ, ಡಿ. ೨೪: ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಅಧ್ಯಕ್ಷರಾಗಿ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯೆ ಗೌರಮ್ಮ ಎಸ್. ಮಹಾದೇವ ಆಯ್ಕೆಯಾಗಿದ್ದಾರೆ.
ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ದಿ ಹಂಗರ್ ಪ್ರಾಜೆಕ್ಟ್, ಕರ್ನಾಟಕ ಮತ್ತು ತರೀಕೆರೆ, ವಿಕಸನ ಸಂಸ್ಥೆ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ೧೩ ಸ್ಪರ್ಧಿಗಳು ಕಣದಲ್ಲಿದ್ದರು. ಈ ಪೈಕಿ ಗೌರಮ್ಮ-೫೬, ಪಲ್ಲವಿ-೪೬, ಗೀತಾ-೪೧, ಕವಿತಾ-೪೧, ಮಾಲತಿ-೩೯, ನಜೀಮಾ ಸುಲ್ತಾನ-೨೮ ಮತ್ತು ಶಾಂತಿಬಾಯಿ-೨೪ ಮತಗಳನ್ನು ಪಡೆದುಕೊಂಡು ಕ್ರಮವಾಗಿ ಅಧ್ಯಕ್ಷರಾಗಿ ಗೌರಮ್ಮ, ಉಪಾಧ್ಯಕ್ಷರಾಗಿ ಪಲ್ಲವಿ, ಕಾರ್ಯದರ್ಶಿಯಾಗಿ ಗೀತಾ, ಖಜಾಂಚಿಯಾಗಿ ಕವಿತಾ ಮತ್ತು ನಿರ್ದೇಶಕರಾಗಿ ಮಾಲತಿ, ನಜೀಮಾ ಸುಲ್ತಾನ ಮತ್ತು ಶಾಂತಿಬಾಯಿ ಆಯ್ಕೆಯಾಗಿದರು.ದಿ ಹಂಗರ್ ಪ್ರಾಜೆಕ್ಟ್, ಕರ್ನಾಟಕದ ಪದ್ಮಿನಿ ಅನಂತ್, ಬೆಳಗಾವಿ ಸ್ಪಂದನ ಸಂಸ್ಥೆಯ ಉಮಾ ಮತ್ತು ಶಂಕರ್ ವಿಕಸನ ಸಂಸ್ಥೆ ಯ ಶಾಲಿನಿ, ತರೀಕೆರೆ ವಿಕಸನ ಸಂಸ್ಥೆಯ ಶಬಾನ ಬೇಗಂ, ರೂಪ ಮತ್ತು ಶ್ರೀನಿವಾಸ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
No comments:
Post a Comment