ಭದ್ರಾವತಿಯಲ್ಲಿ ಜರುಗಿದ ಆಕ್ಷರತೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ಉದ್ಯಮಿ ಬಿ.ಕೆ ಜಗನ್ನಾಥ, ಯುವ ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ನಗರದ ಅನೇಕ ಗಣ್ಯರು ಜಹೈನುಲ್ ಅಬಿದ್(ಎಬಿಡಿ) ನೂತನ ದಂಪತಿಗೆ ಶುಭ ಹಾರೈಸಿದರು.
ಭದ್ರಾವತಿ, ಜ. ೫: ನಗರಸಭೆ ವ್ಯಾಪ್ತಿಯ ಸೀಗೆಬಾಗಿ ಸಿ.ಎನ್ ರಸ್ತೆಯ, ಎ.ಎಸ್ ಫರ್ನಿಚರ್ ಅಬ್ದುಲ್ ರಶೀದ್ ಅವರ ಪುತ್ರ ಜಹೈನುಲ್ ಅಬಿದ್(ಎಬಿಡಿ) ವಿವಾಹ ಅರಕ್ಷತೆ ಬುಧವಾರ ಹೊಳೆಹೊನ್ನೂರು ರಸ್ತೆಯ ಅನ್ವರ್ ಕಾಲೋನಿ ಹಜರತ್ ಸೈಯದ್ ಸಾದತ್ ಮದರಸ(ದಾರುಲುಲೂಮ್)ನಲ್ಲಿ ನಡೆಯಿತು.
ಶಾಸಕ ಬಿ.ಕೆ ಸಂಗಮೇಶ್ವರ್, ಉದ್ಯಮಿ ಬಿ.ಕೆ ಜಗನ್ನಾಥ, ಯುವ ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ನಗರದ ಅನೇಕ ಗಣ್ಯರು ಪಾಲ್ಗೊಂಡು ಶುಭ ಹಾರೈಸಿದರು.
ಅಬಿದ್ ಚಿಕ್ಕಮಗಳೂರಿನ ಅರಣ್ಯ ಗುತ್ತಿಗೆದಾರ ಪಿ.ಕೆ ಸೈಯದ್ ಆಲಿ ಅವರ ಪುತ್ರಿ ಫಾತಿಮಾ ಶಿಫಾನ ಅವರೊಂದಿಗೆ ಜ.೨ರಂದು ಚಿಕ್ಕಮಗಳೂರಿನ ಸಹಾರ ಶಾದಿ ಮಹಲ್‌ನಲ್ಲಿ ವಿವಾಹವಾಗಿದ್ದರು. ಅಬಿದ್ ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಭಾಗದಲ್ಲಿ ಕೆಲವು ವರ್ಷಗಳಿಂದ ವೃತ್ತಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
No comments:
Post a Comment