ಭದ್ರಾವತಿ ನಗರಸಭೆ ಸಮೀಪದ ನೇತಾಜಿ ಆಟೋ ನಿಲ್ದಾಣದಲ್ಲಿ ಭಾನುವಾರ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ನೇತಾಜಿ ಸುಭಾಷ್ ಚಂದ್ರಬೋಸ್‌ರವರ ೧೨೫ನೇ ಜನ್ಮದಿನ ಸರಳವಾಗಿ ಆಚರಿಸಲಾಯಿತು.
ಭದ್ರಾವತಿ, ಜ. ೨೩: ನಗರಸಭೆ ಸಮೀಪದ ನೇತಾಜಿ ಆಟೋ ನಿಲ್ದಾಣದಲ್ಲಿ ಭಾನುವಾರ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ನೇತಾಜಿ ಸುಭಾಷ್ ಚಂದ್ರಬೋಸ್‌ರವರ ೧೨೫ನೇ ಜನ್ಮದಿನ ಸರಳವಾಗಿ ಆಚರಿಸಲಾಯಿತು.
ನೇತಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಟಿ. ಜನಾರ್ಧನ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಸಂಘದ ಗೌರವಾಧ್ಯಕ್ಷ, ನಗರಸಭೆ ಮಾಜಿ ಸದಸ್ಯ ಚಿನ್ನಪ್ಪ, ಉಪಾಧ್ಯಕ್ಷ ಹಫೀಜ್, ಕೃಷ್ಣಪ್ಪ, ಮನು, ಅಶೋಕ್ ಸೇರಿದಂತೆ ಆಟೋ ಮಾಲೀಕರು, ಚಾಲಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment