ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಬುಧವಾರ ಭದ್ರಾವತಿಯಲ್ಲಿ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಿಂದ ಮಾಧವಚಾರ್ ವೃತ್ತದವರೆಗೂ ಶೋಭಯಾತ್ರೆ ನಡೆಸಲಾಯಿತು.
ಭದ್ರಾವತಿ, ಏ. ೬: ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಬುಧವಾರ ನಗರದಲ್ಲಿ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಿಂದ ಮಾಧವಚಾರ್ ವೃತ್ತದವರೆಗೂ ಶೋಭಯಾತ್ರೆ ನಡೆಸಲಾಯಿತು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪಕ್ಷದ ಪ್ರಮುಖರು, ಕಾರ್ಯಕರ್ತರು ಪಕ್ಷದ ತತ್ವ, ಸಿದ್ದಾಂತಗಳು, ಧ್ಯೇಯೋದ್ದೇಶಗಳನ್ನು ಹಾಗು ಬಿಜೆಪಿ ಸರ್ಕಾರದ ಸಾಧನೆಗಳಿಗೆ ಪ್ರಶಂಸೆ ವ್ಯಕ್ತಪಡಿಸಿ ಘೋಷಣೆಗಳನ್ನು ಹಾಕಿದರು. ಶೋಭಯಾತ್ರೆ ಹಾಲಪ್ಪ ವೃತ್ತ ಮೂಲಕ ಮಾಧವಚಾರ್ ವೃತ್ತ ತಲುಪಿತು. ಪಕ್ಷದ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವ ವಹಿಸಿದ್ದರು.
ಪ್ರಮುಖರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ರಂಗಸ್ವಾಮಿ, ಎಸ್. ಕುಮಾರ್, ಎನ್. ವಿಶ್ವನಾಥರಾವ್, ಕರ್ನಾಟಕ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ಎಸಿ.ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್, ಯುವ ಘಟಕದ ಅಧ್ಯಕ್ಷ ವಿಜಯ್‌ರಾಜ್, ನಗರಸಭೆ ಸದಸ್ಯರಾದ ಅನಿತಾ ಮಲ್ಲೇಶ್, ಕರಿಗೌಡ, ಮಂಜುನಾಥ್, ಜಿ. ಆನಂದಕುಮಾರ್, ಎಂ. ಮಂಜುನಾಥ್, ಬಿ.ಎಸ್ ಶ್ರೀನಾಥ್, ರಾಮನಾಥ್ ಬರ್ಗೆ, ರಾಜಶೇಖರ್ ಉಪ್ಪಾರ್, ಚಂದ್ರಪ್ಪ, ಹೇಮಾವತಿ, ಕವಿತಾ, ಅನ್ನಪೂರ್ಣ, ಮಂಜುಳ, ಚಂದ್ರು, ಸತೀಶ್‌ಕುಮಾರ್, ಸುಬ್ರಮಣಿ, ಧನುಷ್ ಬೋಸ್ಲೆ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಪಕ್ಷಕ್ಕೆ ಸೇರ್ಪಡೆ :
ಪಕ್ಷದ ತತ್ವ, ಸಿದ್ದಾಂತಗಳು, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿಗಳನ್ನು ಮೆಚ್ಚಿ ಪಕ್ಷದ ಸಂಸ್ಥಾಪನಾ ದಿನದಂದು ನಗರದಲ್ಲಿ ಕೆಲವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಹರೀಶ್, ಮೋಹನ್, ವೆಂಕಟೇಶ್ ಮತ್ತು ವಿಶು ಸೇರಿದಂತೆ ಇನ್ನಿತರರು ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷದ ಸ್ಥಳೀಯ ಮುಖಂಡ ರಾಜಶೇಖರ ಉಪ್ಪಾರ ಪಕ್ಷದ ಧ್ವಜ ನೀಡಿ ಪರಮಾಡಿ ಕೊಂಡರು.
ಬಿಜೆಪಿ ಪಕ್ಷದ ತತ್ವ, ಸಿದ್ದಾಂತಗಳು, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿಗಳನ್ನು ಮೆಚ್ಚಿ ಪಕ್ಷದ ಸಂಸ್ಥಾಪನಾ ದಿನದಂದು ಭದ್ರಾವತಿಯಲ್ಲಿ ಕೆಲವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
No comments:
Post a Comment