ಭದ್ರಾವತಿ ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಮಂಗಳವಾರ ವಿಶೇಷವಾಗಿ ಬಸವೇಶ್ವರ ಜಯಂತಿ ಹಾಗು ಅಕ್ಷಯ ತೃತೀಯ ಆಚರಿಸಲಾಯಿತು.
ಭದ್ರಾವತಿ, ಮೇ. ೩: ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಮಂಗಳವಾರ ವಿಶೇಷವಾಗಿ ಬಸವೇಶ್ವರ ಜಯಂತಿ ಹಾಗು ಅಕ್ಷಯ ತೃತೀಯ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ದಿವಂಗತ ಗೋವಿಂದರಾವ್‌ರವರ ಪತ್ನಿ ಶತಾಯುಷಿ ಸುಂದರ ಬಾಯಿ ಹಾಗು ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ಅಖಿಲಭಾರತ ವೀರಶೈವ ಯುವ ಘಟಕದ ಅಧ್ಯಕ್ಷ ಎಚ್. ಮಂಜುನಾಥ್, ಉಪಾಧ್ಯಕ್ಷ ಕೂಡ್ಲಿಗೆರೆ ಆರ್.ಎನ್ ರುದ್ರೇಶ್, ಖಜಾಂಚಿ ಬಿ.ಎಂ ರಮೇಶ್, ಪ್ರಧಾನ ಕಾರ್ಯದರ್ಶಿ ಕೆ.ಆರ್ ಆನಂದ್, ನಿರ್ದೇಶಕರಾದ ಮಂಜುನಾಥ್, ಹರೀಶ್, ಸಂತೋಷ್, ವಿನಯ್, ಜೆಡಿಯು ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ, ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ವಸಂತ, ದೂದನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್, ಮಾಜಿ ಅಧ್ಯಕ್ಷ ಲಂಬೋದರ, ಅರ್ಜುನ್‌ರಾವ್, ಲೋಕೇಶ್‌ರಾವ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
No comments:
Post a Comment