Wednesday, May 4, 2022

ಕಲಿಕಾ ಚೇತರಿಕೆ ಉಪಕ್ರಮದ ತರಬೇತಿ ಸಾರ್ಥಕಗೊಳಿಸಿ : ಮಂಜುನಾಥ್

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಭದ್ರಾವತಿ ನ್ಯೂಟೌನ್ ಸೆಂಟ್ ಚಾರ್ಲ್ಸ್ ಶಾಲೆಯಲ್ಲಿ ಅಯೋಜಿಸಲಾಗಿದ್ದ ಕಲಿಕಾ ಚೇತರಿಕೆ ತರಬೇತಿ ಕಾರ್ಯಾಗಾರ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ(ಚಿತ್ರದುರ್ಗ) ಮಂಜುನಾಥ್ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ, ಮೇ. ೪: ಕೋವಿಡ್-೧೯ ಕರಾಳತೆಯಲ್ಲಿ ಮಕ್ಕಳು ಕಲಿಕೆಯಿಂದ ವಂಚಿತರಾಗಿದ್ದು, ಇದನ್ನು ಸರಿದೊಗಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ  ಕಲಿಕಾಚೇತರಿಕೆ ಉಪಕ್ರಮಗಳನ್ನು ಜಾರಿಗೆ ತಂದಿದೆ. ಶಿಕ್ಷಕರು ತರಬೇತಿ ಮೂಲಕ ಪ್ರತಿ ಮಗುವಿಗೆ ಈ ಉಪಕ್ರಮಗಳನ್ನು ಸಮರ್ಪಕವಾಗಿ ತಲುಪಿಸುವ ಕಾರ್ಯ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ(ಚಿತ್ರದುರ್ಗ) ಮಂಜುನಾಥ್ ಹೇಳಿದರು.
    ಅವರು ಬುಧವಾರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಶಾಲೆಯಲ್ಲಿ ಅಯೋಜಿಸಲಾಗಿದ್ದ ಕಲಿಕಾ ಚೇತರಿಕೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು
    ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಕಾರ್ಯಾಗಾರದಲ್ಲಿ ತಾಲೂಕಿನ ಶಾಲಾ ಶಿಕ್ಷಕರಿಗೆ ಎಲ್ಲಾ ವಿಷಯಗಳ ಕುರಿತು ಒಟ್ಟು ೧೬ ಘಟಕಗಳಲ್ಲಿ ತರಬೇತಿ ನೀಡಲಾಗುತ್ತದೆ. ಶಿಕ್ಷಕರು ಇದರ ಸದುಪಯೋಗಪಡೆದುಕೊಂಡು ಸಾರ್ಥಕಗೊಳಿಸಬೇಕೆಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ  ಮಾತನಾಡಿ, ಶಿಕ್ಷಕರು ತರಬೇತಿ ಸದ್ಬಳಕೆ ಮಾಡಿಕೊಂಡು ತಾಲೂಕಿನ ಎಲ್ಲಾ ಶಾಲೆಯ ಪ್ರತಿ ಮಗುವಿನ ಕಲಿಕೆಯ ನಷ್ಟವನ್ನು ಈ ಮೂಲಕ ಸರಿದೊಗಿಸಿ ಎಂದರು.
    ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಗಣೇಶ್, ಟಿಪಿಇಓ ಪ್ರಭು, ಶಿಕ್ಷಣ ಸಂಯೋಜಕರುಗಳಾದ ರವಿಕುಮಾರ್, ಜ್ಯೋತಿ,  ಶ್ಯಾಮಲಾ  ಮತ್ತು ಬಿಆರ್‌ಪಿ ನವೀದ್ ಅಹಮದ್, ಎಂಅರ್‌ಪಿಗಳಾದ ಪಿ.ಕೆ ಸತೀಶ್, ಮಾಯಮ್ಮ, ಮಂಜುನಾಥ್ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೃಥ್ವಿ ರಾಜ್ ಹಾಗು ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು.  ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು  ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.

No comments:

Post a Comment