Wednesday, July 13, 2022

ಭದ್ರಾ ಜಲಾಶಯ ಭರ್ತಿಗೆ 6 ಅಡಿ ಬಾಕಿ

    

ಭದ್ರಾವತಿ, ಜು. ೧೩: ಭದ್ರಾ ಜಲಾಶಯ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ೩೫ ಸಾವಿರ ಕ್ಯೂಸೆಕ್ ನೀರು ಒಳ ಹರಿವಿದ್ದು, ಇಂದಿನ ನೀರಿನ ಮಟ್ಟ ೧೮೦.೨ ಅಡಿಗೆ ಏರಿಕೆಯಾಗಿದೆ. ಡ್ಯಾಂ ಭರ್ತಿಗೆ ಕೇವಲ ೬ ಅಡಿ ಮಾತ್ರ ಬಾಕಿ ಉಳಿದಿದೆ.
     ಇಂದು (ಜು.೧೩) ೩೫.೩೨೧ ಕ್ಯೂಸೆಕ್ ಒಳಹರಿವಿದ್ದು, ನಿನ್ನೆ ೪೧,೬೪೫ ಕ್ಯೂಸೆಕ್ ಒಳ ಹರಿವಿತ್ತು. ಇಂದು ಬೆಳಗ್ಗೆ ೬ ಗಂಟೆ ವೇಳೆಗೆ ನೀರಿನ ಮಟ್ಟ ೧೮೦.೨ ಅಡಿಗೆ ತಲುಪಿದೆ. ಇದರಿಂದ ಡ್ಯಾಂ ಭರ್ತಿಗೆ ಇನ್ನು ೬ ಅಡಿ ಬಾಕಿ ಉಳಿದಿದೆ. 
     ಕಳೆದ ವರ್ಷ ಈ ದಿನ ಕೇವಲ ೧೫೬.೮ ಅಡಿಯಷ್ಟು ನೀರಿತ್ತು. ಈಗ ಕಳೆದ ವರ್ಷಕ್ಕಿಂತ ೨೪ ಅಡಿಗೂ ಹೆಚ್ಚುವರಿ ನೀರು ಸಂಗ್ರಹವಾಗಿದೆ. ಹೀಗಾಗಿ ಇಂದು ಡ್ಯಾಂ ಕಾಲುವೆಗಳಿಗೆ ೧೦ ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

No comments:

Post a Comment