ಎಚ್.ಎಸ್ ಕೃಷ್ಣಮೂರ್ತಿ
ಭದ್ರಾವತಿ, ಜು. ೨೮: ಉಂಬ್ಳೆಬೈಲು ರೈತ ಸೇವಾ ಸಹಕಾರ ಸಂಘದ ಸಂಸ್ಥಾಪಕ, ಮಡಿವಾಳ ಸಮಾಜದ ಮುಖಂಡ ಜಮೀನ್ದಾರ್ ಎಚ್.ಎಸ್ ಕೃಷ್ಣಮೂರ್ತಿ(೮೮) ಗುರುವಾರ ನಿಧನ ಹೊಂದಿದರು.
ಉಂಬ್ಳೆಬೈಲು ಸಮೀಪದ ಆಲ್ದಾರ ಗ್ರಾಮದ ಕೃಷ್ಣಮೂರ್ತಿಯವರಿಗೆ ೩ ಜನ ಗಂಡು, ೫ ಜನ ಹೆಣ್ಣು ಮಕ್ಕಳಿದ್ದರು. ಇವರ ಅಂತ್ಯಕ್ರಿಯೆ ಜು.೨೯ರ ಬೆಳಿಗ್ಗೆ ೧೨ ಗಂಟೆಗೆ ಗ್ರಾಮದಲ್ಲಿರುವ ಇವರ ಜಮೀನಿನಲ್ಲಿ ನಡೆಯಲಿದೆ.
ಇವರ ನಿಧನಕ್ಕೆ ಮಡಿವಾಳ ಸಮಾಜದ ಮುಖಂಡರು, ರೈತ ಪ್ರಮುಖರು, ಗಣ್ಯರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.
No comments:
Post a Comment