ಸ್ಕಾಟ್‌ಲ್ಯಾಂಡ್‌ನಲ್ಲಿ ವಾಸವಿರುವ ಎಚ್.ಆರ್ ಶ್ರೀಕಾಂತ್ ಮತ್ತು ಶ್ರೀದೇವಿ ದಂಪತಿಗೆ ಜನಿಸಿರುವ ಹೆಣ್ಣು ಮಗು ಸ್ಕಾಟ್‌ಲ್ಯಾಂಡ್ ಪ್ರಜೆ ಸ್ಪಟಿಕ ಶ್ರೀಕಾಂತ್.
ಭದ್ರಾವತಿ, ಆ. ೧೯: ಸ್ಕಾಟ್‌ಲ್ಯಾಂಡ್‌ನಲ್ಲಿ ಜನಿಸಿದ ಹೆಣ್ಣು ಮಗುವಿನ ನಾಮಕರಣ ತುಂಗಾ ನದಿ ತೀರದಲ್ಲಿ ಹಿಂದೂ ಸಂಪ್ರದಾಯದಂತೆ ನೆರವೇರಿತು.
ನಗರದ ಎಂಪಿಎಂ ಕಾರ್ಖಾನೆಯ ನಿವೃತ್ತ ಕಾರ್ಮಿಕ ಡಿ. ರುದ್ರಯ್ಯನವರ ಪುತ್ರ ಎಚ್.ಆರ್ ಶ್ರೀಕಾಂತ್ ಮತ್ತು ಕೇಶವಪುರ ಬಡಾವಣೆ(ಗಾಂಧಿನಗರ) ನಿವಾಸಿ ನಾಗರಾಜ್‌ರವರ ಪುತ್ರಿ ಶ್ರೀದೇವಿ ಸ್ಕಾಟ್‌ಲ್ಯಾಂಡ್ ಎಡಿನ್‌ಬರ್ಗ್‌ನಲ್ಲಿ ವಾಸವಿದ್ದು, ಈ ದಂಪತಿಗೆ ಫೆ.೫ರಂದು ಹೆಣ್ಣು ಮಗು ಜನಸಿದೆ.
ಕಳೆದ ವಾರ ಮಗುವಿನೊಂದಿಗೆ ತಾಯ್ನಾಡಿಗೆ ಆಗಮಿಸಿದ ದಂಪತಿ ಕುಟುಂಬ ಸದಸ್ಯರು, ಬಂಧು-ಬಳಗದವರೊಂದಿಗೆ ಶಿವಮೊಗ್ಗ ಗಾಜನೂರು ತುಂಗಾ ಜಲಾಶಯ ಸಮೀಪದಲ್ಲಿರುವ ತುಂತುರು ಫಾರಂ ಹೌಸ್‌ನಲ್ಲಿ ಹಿಂದೂ ಸಂಪ್ರದಾಯದಂತೆ ನಾಮಕರಣ ನೆರವೇರಿಸುವ ಮೂಲಕ ಮಗುವಿಗೆ ಸ್ಪಟಿಕ ಶ್ರೀಕಾಂತ್ ಎಂದು ಹೆಸರಿಡುವ ಮೂಲಕ ಸಂಭ್ರಮಿಸಿದರು.
ಶ್ರೀಕಾಂತ್ ಮತ್ತು ಶ್ರೀದೇವಿ ಇಬ್ಬರು ಇಂಜಿನಿಯರ್ ಆಗಿದ್ದು, ಶ್ರೀಕಾಂತ್ ವಿಪ್ರೋ ಕಂಪನಿ ಉದ್ಯೋಗಿಯಾಗಿ ನೇಮಕಗೊಂಡು ಕಳೆದ ಕೆಲವು ವರ್ಷಗಳಿಂದ ಸ್ಕಾಟ್‌ಲ್ಯಾಂಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಗು ವಿದೇಶದಲ್ಲಿ ಜನಿಸಿದರೂ ಸಹ ತಾಯ್ನಾಡಿನ ಅಭಿಮಾನ, ಪ್ರೀತಿ, ಹಿಂದೂ ಸಂಪ್ರದಾಯದಂತೆ ನಾಮಕರಣ ನೆರವೇರಿಸಬೇಕೆಂಬ ದಂಪತಿ ಕನಸು ಒಂದೆಡೆ ನನಸಾಗಿದೆ. ಮತ್ತೊಂದೆಡೆ ಈ ದಂಪತಿ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಸ್ಪೂರ್ತಿದಾಯಕ ಎಂದರೆ ತಪ್ಪಾಗಲಾರದು.
No comments:
Post a Comment