Thursday, September 15, 2022

ಸೆ.೧೭ರಂದು ಉಚಿತ ನೇತ್ರ ತಪಾಸಣಾ ಶಿಬಿರ, ಶಿಕ್ಷಕರ, ಅಭಿಯಂತರರ ದಿನಾಚರಣೆ


    ಭದ್ರಾವತಿ, ಸೆ. ೧೫ : ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ, ನಗರದ ಲಯನ್ಸ್ ಮತ್ತು ಲಿಯೋ ಕ್ಲಬ್ ಹಾಗು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಜನ್ನಾಪುರ ಶ್ರೀ ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್ ವತಿಯಿಂದ ಸೆ.೧೭ರಂದು ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
    ಶಿಬಿರ ಜನ್ನಾಪುರ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೨.೩೦ರ ವರೆಗೆ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಎ.ಎನ್ ಕಾರ್ತಿಕ್ ಮೊ: ೯೫೩೮೩೫೦೩೪೮ ಅಥವಾ ನಾಗರಾಜ್ ಎಂ. ಶೇಟ್ ಮೊ: ೯೪೪೮೨೩೮೭೪೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
    ಶಿಕ್ಷಕರ ಮತ್ತು ಅಭಿಯಂತರರ ದಿನಾಚರಣೆ :
    ನ್ಯೂಟೌನ್ ಲಯನ್ಸ್‌ಕ್ಲಬ್ ಭವನದಲ್ಲಿ ಸಂಜೆ ೭.೩೦ಕ್ಕೆ ಶಿಕ್ಷಕರ ಮತ್ತು ಅಭಿಯಂತರರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಲಯನ್ಸ್ ೩೧೭ಸಿ ಪ್ರಾಂತ್ಯ-೨, ವಲಯ-೨ರ ಅಧ್ಯಕ್ಷ ಕೆ.ವಿ ಚಂದ್ರಶೇಖರ, ಮಾಜಿ ಗೌರ‍್ನರ್ ಬಿ. ದಿವಾಕರ ಶೆಟ್ಟಿ ಉಪಸ್ಥಿತರಿರುವರು. ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎನ್ ಕಾರ್ತಿಕ್ ಅಧ್ಯಕ್ಷತೆ ವಹಿಸಲಿದ್ದಾರೆ.
    ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಬಿ.ಎಂ ನಾಸಿರ್‌ಖಾನ್, ನೆಹರು ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಎಸ್. ಶಶಿಕಲಾ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಆರ್ ದಯಾನಂದ ಮತ್ತು ಹಾಲಪ್ಪ ವೃತ್ತದ ನಿವಾಸಿ, ಅಭಿಯಂತರ ಬಾಬು ಶೆಟ್ಟಿ ಅವರಿಗೆ ಸನ್ಮಾನ  ಹಮ್ಮಿಕೊಳ್ಳಲಾಗಿದೆ. 
--

No comments:

Post a Comment