Thursday, December 22, 2022

‘ಮ್ಯೂಚ್ಯುಯಲ್ ಫಂಡ್‌ನಿಂದ ಸಂಪತ್ತಿನ ವೃದ್ಧಿ’ ಕಾರ್ಯಾಗಾರ

ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿಗಳಿಗೆ ಇನ್ನರ್‌ವೀಲ್ ಕ್ಲಬ್ ಶಿವಮೊಗ್ಗ ಉತ್ತರ ಹಾಗು ಐಸಿಐಸಿಐ ಪ್ರುಡೆನ್ಸಿಯಲ್ ಮ್ಯೂಚ್ಯುಯಲ್ ಫಂಡ್ ಕಂಪನಿ ಸಹಯೋಗದೊಂದಿಗೆ 'ಮ್ಯೂಚ್ಯುಯಲ್ ಫಂಡ್‌ನಿಂದ ಸಂಪತ್ತಿನ ವೃದ್ಧಿ' ಘೋಷಣೆಯೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿತ್ತು.
    ಭದ್ರಾವತಿ, ಡಿ. ೨೨: ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿಗಳಿಗೆ ಇನ್ನರ್‌ವೀಲ್ ಕ್ಲಬ್ ಶಿವಮೊಗ್ಗ ಉತ್ತರ ಹಾಗು ಐಸಿಐಸಿಐ ಪ್ರುಡೆನ್ಸಿಯಲ್ ಮ್ಯೂಚ್ಯುಯಲ್ ಫಂಡ್ ಕಂಪನಿ ಸಹಯೋಗದೊಂದಿಗೆ 'ಮ್ಯೂಚ್ಯುಯಲ್ ಫಂಡ್‌ನಿಂದ ಸಂಪತ್ತಿನ ವೃದ್ಧಿ' ಘೋಷಣೆಯೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿತ್ತು.  
'    ವಿದ್ಯಾರ್ಥಿಗಳಲ್ಲಿ ಉಳಿತಾಯದ ಬಗ್ಗೆ ಅರಿವು ಮೂಡಿಸುವಲ್ಲಿ ಮ್ಯೂಚ್ಯುಯಲ್ ಫಂಡ್‌ನ ಪಾತ್ರ' ವಿಷಯ ಕುರಿತು  ಐಸಿಐಸಿಐ ಪ್ರುಡೆನ್ಸಿಯಲ್ ಮ್ಯೂಚ್ಯುಯಲ್ ಫಂಡ್ ಕಂಪನಿ ಕ್ಲಸ್ಟರ್ ಮ್ಯಾನೇಜರ್ ರೋಹಿತ್‌ಶೆಟ್ಟಿ ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸ ನೀಡಿ, ಮ್ಯೂಚ್ಯುಯಲ್ ಫಂಡ್ ಹಾಗು ಅದರ ಬೆಳವಣಿಗೆ ಕುರಿತು ವಿವರಿಸಿದರು. ಮ್ಯೂಚ್ಯುಯಲ್ ಫಂಡ್ ಹೂಡಿಕೆಯಿಂದ ಹೂಡಿಕೆದಾರನು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಂತೆ. ಅಲ್ಲದೆ ಹೂಡಿಕೆಯು ಪ್ರತಿಯೊಬ್ಬರ ಸಂಪತ್ತಿನ ವೃದ್ಧಿಗೆ ದಾರಿಯಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಹೂಡಿಕೆ ಮಾಡಬೇಕೆಂದರು.
ಇಂಜಿನಿಯರ್ ಎಂ.ಎಸ್ ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಉಳಿತಾಯ ಹಾಗು ಮ್ಯೂಚ್ಯುಯಲ್ ಫಂಡ್‌ನಲ್ಲಿ ತೊಡಗಿಸುವುದರಿಂದ ಆಗುವ ಲಾಭದ ಬಗ್ಗೆ ಯುವ ಜನತೆ ಚಿಂತಿಸಬೇಕು ಹಾಗು ಯೋಜಿತ ಜೀವನವಿದ್ದಲ್ಲಿ ಮಾತ್ರ ನೆಮ್ಮದಿಯ ಜೀವನ ಸಾಗಿಸಬಹುದು ಎಂದರು.
    ಇನ್ನರ್‌ವೀಲ್ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷೆ ಜಿ.ಪಿ ಚಂದ್ರಮ್ಮ ಮಾತನಾಡಿ, ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ಉಳಿತಾಯ ಮಾಡುವುದರಿಂದ ಆಗುವ ಲಾಭ ಹಾಗು ಭವಿಷ್ಯದಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎನ್ನುವುದನ್ನು ವಿವರಿಸಿದರು.
    ಕಾಲೇಜಿನ ಪ್ರಾಂಶುಪಾಲ ಪ್ರೊ. ಯು.ಎಸ್ ರಾಜಕುಮಾರ್ ಕಾರ್ಯಾಗಾರ ಉದ್ಘಾಟಿಸಿದರು. ಸುಧಾ, ನಳಿನಿ ಐತಾಳ್, ಪ್ರೊ. ಬಿ.ಎಚ್ ವಾಸಪ್ಪ, ನವೀನ್, ಪ್ರವೀಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಉಷಾ ವೆಂಕಟೇಶ್ ಪ್ರಾರ್ಥಿಸಿ, ಸುನೀತ ಸ್ವಾಗತಿಸಿದರು. ವಾರಿಜಾ ಜಗದೀಶ್ ವಂದಿಸಿದರು.

No comments:

Post a Comment