Friday, December 23, 2022

ಹೋಬಳಿ ಸಾಹಿತ್ಯ ಸಮ್ಮೇಳನಾಧ್ಯಕ್ಷ ಟಿ. ಮಂಜಪ್ಪರಿಗೆ ಸನ್ಮಾನ, ಅಭಿನಂದನೆ

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿವೃತ್ತ ಮುಖ್ಯಶಿಕ್ಷಕ, ಸಾಹಿತಿ ಟಿ. ಮಂಜಪ್ಪ ದಂಪತಿಯನ್ನು ವಿಶ್ರಾಂತ ಗೆಳೆಯರ ಬಳಗದಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಡಿ. ೨೩: ತಾಲೂಕಿನ ಹೊಳೆಹೊನ್ನೂರು ಹೋಬಳಿ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿವೃತ್ತ ಮುಖ್ಯಶಿಕ್ಷಕ, ಸಾಹಿತಿ ಟಿ. ಮಂಜಪ್ಪ ದಂಪತಿಯನ್ನು ವಿಶ್ರಾಂತ ಗೆಳೆಯರ ಬಳಗದಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಸಭೆಯಲ್ಲಿ ಭಾಗವಹಿಸಿದ್ದ ವಿಶ್ರಾಂತ ಗೆಳೆಯರು ಮಂಜಪ್ಪರವರೊಂದಿಗಿನ ಒಡನಾಟದ ಅನುಭವಗಳನ್ನು ಹಂಚಿಕೊಂಡರು. ಅಲ್ಲದೆ ಅವರ ಸಾಹಿತ್ಯ ಕೃಷಿ ಮತ್ತು ಶಿಕ್ಷಕ ವೃತ್ತಿಯಲ್ಲಿನ ಸಾಧನೆಗೆ ಮುಚ್ಚುಗೆ ವ್ಯಕ್ತಪಡಿಸಿದರು.
    ಮಂಜಪ್ಪರವರ ಆಯ್ಕೆಗೆ ಕಾರಣೀಭೂತರಾದ ಎಲ್ಲರನ್ನೂ ಸ್ಮರಿಸಿಕೊಂಡು ಡಿ.೨೫ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲೆಂದು ಶುಭಕೋರಿದರು.
    ಪ್ರಾಚಾರ್ಯರಾದ ಗುಡ್ಡಪ್ಪ ಕುಟ್ರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯರಾದ ಎ.ಕೆ.ಚಂದ್ರಪ್ಪ, ಸೋಮಶೇಖರ್, ನಿವೃತ್ತ ಉಪನ್ಯಾಸಕರಾದ ಬಸವರಾಜಪ್ಪ, ಆಯನೂರು ಬಸವರಾಜಪ್ಪ, ನಿವೃತ್ತ ಶಿಕ್ಷಕ ನಾಗೇಂದ್ರಪ್ಪ, ಪ್ರಾಚಾರ್ಯ ಉದಯಕುಮಾರ್, ಸಾಹಿತಿ ಬಸವರಾಜಪ್ಪ, ಡಾ.ಎಂ. ವಿವೇಕಾನಂದ, ಶಿಕ್ಷಕಿಯರಾದ ನಿರ್ಮಲ, .ನೀಲಮ್ಮ ಮತ್ತು ವೇದ ಉಪಸ್ಥಿತರಿದ್ದರು.

No comments:

Post a Comment