ಕೆ.ಎಂ ಶೋಭ
ಭದ್ರಾವತಿ, ಫೆ. ೨೨ : ನಗರದ ಹಿರಿಯ ಪತ್ರಕರ್ತ ಕೆ.ಎನ್ ರವೀಂದ್ರನಾಥ್(ಬ್ರದರ್)ರವರ ಅತ್ತಿಗೆ ಹುತ್ತಾ ಕಾಲೋನಿ ಚಂದ್ರಾಲಯ ಹಿಂಭಾಗದ ನಿವಾಸಿ ಕೆ.ಎಂ ಶೋಭ(೬೪) ನಿಧನ ಹೊಂದಿದರು.
೩ ಪುತ್ರರು, ಇಬ್ಬರು ಸೊಸೆಯಂದಿರು, ಮೊಮ್ಮಕ್ಕಳು ಇದ್ದರು. ಕೆ.ಎಂ ಶೋಭರವರು ಬಾಂಬೆ ಟೈಲರ್ ಎಂದು ಕರೆಯಲ್ಪಡುತ್ತಿದ್ದ ದಿವಂಗತ ಕೆ.ಎನ್ ಮಹೇಂದ್ರನಾಥ್‌ರವರ ಪತ್ನಿಯಾಗಿದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ಹುತ್ತಾ ಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
No comments:
Post a Comment