ಪ್ರೊ. ಬಿ.ಎಸ್ ಬಿರಾದಾರ್
ಭದ್ರಾವತಿ, ಮಾ. ೨೦: ಇಲ್ಲಿನ ಕುವೆಂಪು ವಿಶ್ವ ವಿದ್ಯಾಲಯದ ವಿಜ್ಞಾನ ನಿಕಾಯದ ಡೀನ್ ಪ್ರೊ. ಬಿ.ಎಸ್ ಬಿರಾದಾರ್ ಅವರನ್ನು ಸರ್ಕಾರ ಸೋಮವಾರ ಕುಲಪತಿಗಳಾಗಿ ನೇಮಕಗೊಳಿಸಿ ವರ್ಗಾವಣೆಗೊಳಸಿದೆ.
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬೀದರ್ ವಿಶ್ವ ವಿದ್ಯಾಲಯದ ಮೊದಲ ಕುಲಪತಿಯಾಗಿ ಪ್ರೊ. ಬಿ.ಎಸ್ ಬಿರಾದಾರ್‌ರವರು ನೇಮಕಗೊಂಡಿದ್ದು, ಇವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಸುಮಾರು ೨ ದಶಕಗಳಿಗೂ ಹೆಚ್ಚು ಕಾಲದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.
ಬಿರಾದಾರ್‌ರವರು ಕುಲಪತಿಯಾಗಿ ನೇಮಕಗೊಂಡಿರುವುದಕ್ಕೆ ಕುವೆಂಪು ವಿಶ್ವವಿದ್ಯಾನಿಲಯ ಅಧ್ಯಾಪಕೇತರ ನೌಕರರ ಸಂಘ ನೌಕರರ ಪರವಾಗಿ ಅಭಿನಂದಿಸಿದೆ.
No comments:
Post a Comment