ಹಿರಿಯ ಸಾಹಿತಿ, ಸಂಶೋಧಕ ಜೆ.ಎನ್ ಬಸವರಾಜಪ್ಪ ಕವನ ರಚನೆ
ಭದ್ರಾವತಿ, ಮಾ. ೫ : ಭದ್ರಾವತಿ ಉಳಿಸಿ ವಿಐಎಸ್‌ಎಲ್-ಎಂಪಿಎಂ ಚಳುವಳಿ ಹೆಸರಿನಲ್ಲಿ ಅಂತರ್ಜಾಲದಲ್ಲಿ ಹಮ್ಮಿಕೊಳ್ಳಲಾಗಿರುವ ಹೋರಾಟಕ್ಕೆ ಪೂರಕ ಸ್ಪಂದನೆ ವ್ಯಕ್ತವಾಗುತ್ತಿದೆ. ಇದುವರೆಗೂ ಸುಮಾರು ೩೧೫ ಮಂದಿ ಹೋರಾಟಕ್ಕೆ ಪೂರಕವಾಗಿ ಸ್ಪಂದಿಸಿದ್ದು, ಈ ಪೈಕಿ ೩೧೩ ಮಂದಿ ಬೆಂಬಲ ಹಾಗು ಇಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ.
೧೯೫ ನಾಗರೀಕರು, ೭೮ ಗುತ್ತಿಗೆ ಕಾರ್ಮಿಕರು, ೨೨ ಕಾಯಂ ಹಾಗು ನಿವೃತ್ತ ಕಾರ್ಮಿಕರು, ಓರ್ವ ರೈತ, ಓರ್ವ ಸರ್ಕಾರಿ ಉದ್ಯೋಗಿ, ಇಬ್ಬರು ಖಾಸಗಿ ಉದ್ಯೋಗಿ, ೫ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೩೧೩ ಮಂದಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಬ್ಬರು ನಾಗರೀಕರು ವಿರೋಧಿಸಿದ್ದಾರೆ. ಅಂತರ್ಜಾಲದಲ್ಲಿ ನಡೆಯುತ್ತಿರುವ ಈ ಹೋರಾಟ ಮತ್ತಷ್ಟು ತೀವ್ರತೆ ಪಡೆದುಕೊಳ್ಳಬೇಕಾಗಿದೆ. ಸಮಸ್ತ ನಾಗರೀಕರು ತಮ್ಮ ನಿಲುವು ವ್ಯಕ್ತಪಡಿಸಬೇಕಾಗಿದೆ.
ಹಿರಿಯ ಸಾಹಿತಿ ಜೆ.ಎನ್ ಬಸವರಾಜಪ್ಪ ಕವನ ರಚನೆ :
ನಗರದ ಹಿರಿಯ ಸಾಹಿತಿ, ಸಂಶೋಧಕ ಜೆ.ಎನ್ ಬಸವರಾಜಪ್ಪನವರು ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಇಂದಿನ ಪರಿಸ್ಥಿತಿ ಕುರಿತು ಕವನ ರಚಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಭದ್ರಾವತಿಯ ದುಃಸ್ಥಿತಿ-ಕವನ
ಬದುಕು ನಂಬಿ ಬಂದವರಿಗೆಲ್ಲ
ಬದುಕು ಕೊಟ್ಟಿದ್ದು ಭದ್ರಾವತಿ
ಆಶ್ರಯ ಬಯಸಿ ಬಂದವರಿಗೆಲ್ಲ
ಆಶ್ರಯ ನೀಡಿದ್ದು ಭದ್ರಾವತಿ
ಇಂಥಾ ಕೈಗಾರಿಕಾ ನಗರಕ್ಕೆ
ಈಗ ಬಂದೊದಗಿದೆ ದುಃಸ್ಥಿತಿ
ವಿಐಎಸ್‌ಎಲ್ - ಎಂಪಿಎಂ ಕಾರ್ಖಾನೆಗಳ ಅವನತಿ
ಕಾರ್ಮಿಕರ ಬದುಕಾಗಿದೆ ಅಧೋಗತಿ
ರಾಜಕೀಯ ನಾಯಕರಾರೂ
ವಹಿಸಲಿಲ್ಲ ಮುಂಜಾಗ್ರತಿ
ಅವರಿಗೆ ಬೇಕಿಲ್ಲ.
ಕಾರ್ಮಿಕರ ಹಿತಾಸಕ್ತಿ
ಈಗಲಾದರೂ ಸರ್ಕಾರ
ಅರಿಯಬೇಕಿದೆ ಕಾರ್ಮಿಕರ ಪರಿಸ್ಥಿತಿ
ಕಡೆಗಣಿಸಿದರೆ, ಕಾರ್ಮಿಕರ ಹೋರಾಟಕ್ಕೆ
ಇರುವುದಿಲ್ಲ ಇತಿ ಮಿತಿ
ಒಪ್ಪಿ ನಡೆದರೆ ಭದ್ರಾವತಿ
ತಪ್ಪಿ ನಡೆದರೆ ಅಧೋಗತಿ
ನಾವು ಸುಮ್ಮನಿದ್ದರೆ ವಂಕಿಪುರ
ಎದ್ದು ನಿಂತರೆ ಬೆಂಕಿಪುರ
ಎಚ್ಚರ ಎಚ್ಚರ ಎಚ್ಚರ...
- ಜೆ.ಎನ್ ಬಸವರಾಜಪ್ಪ
--
No comments:
Post a Comment