ಭದ್ರಾವತಿ, ಮಾ. ೨ : ಜಗಳ ವಿಚಾರಿಸಲು ಹೋದ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಜೆ. ಉಮೇಶ್(೪೨) ಎಂಬುವರು ಹಲ್ಲೆಗೊಳಗಾಗಿದ್ದು, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಮೇಶ್‌ರವರು ತಮಗೆ ಪರಿಚಯವಿರುವ ಸಾಗರ್ ಮತ್ತು ಇತರೆ ಮೂವರು ಮಾ.೧ರ ಸಂಜೆ ಚಿದಾನಂದ, ಪ್ರವೀಣ ಹಾಗು ನಾಗರಾಜ್ ಎಂಬುವರ ಜೊತೆ ಜಗಳವಾಡುತ್ತಿದ್ದು, ಇದನ್ನು ಕಂಡು ವಿಚಾರಿಸಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಸಾಗರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೊತೆಯಲ್ಲಿದ್ದವರೊಂದಿಗೆ ಹಲ್ಲೆ ನಡೆಸುವ ಮೂಲಕ ಜೀವಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಉಮೇಶ್ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
No comments:
Post a Comment