ಭದ್ರಾವತಿ, ಮಾ. ೭: ಬಗರ್ ಹುಕುಃ ಸಾಗುವಳಿದಾರರಿಗೆ ಅನ್ಯಾಯವಾಗಿದ್ದು, ಸಾಗುವಳಿ ಮಾಡಿಕೊಂಡು ಬರುವ ರೈತರಿಗೆ ಅವರ ಜಮೀನಿನ ಮೇಲೆ ಯಾವುದೇ ರೀತಿಯ ತೊಂದರೆ ನೀಡಬಾರದು ಹಾಗು ತಿದ್ದುಪಡಿಯಾಗಿರುವ ಪಹಣಿ ಮತ್ತು ಮುಟೇಷನ್ ಈ ಹಿಂದೆ ಇದ್ದ ದಾಖಲಾತಿಯಂತೆ ನಮೂದು ಮಾಡಬೇಕು ಮತ್ತು ರೈತರಿಗೆ ಸಾಗುವಳಿ ಚೀಟಿ ನೀಡಬೇಕೆಂದು ತಾಲೂಕಿನ ಕೋಡಿಹಳ್ಳಿ ಗ್ರಾಮದ ಬಗರ್ ಹುಕುಃ ಸಾಗುವಳಿದಾರ ಆರ್. ರುದ್ರಪ್ಪ ಸೇರಿದಂತೆ ಸುಮಾರು ೨೦ಕ್ಕೂ ಹೆಚ್ಚಿನ ರೈತರು ತಹಸೀಲ್ದಾರ್‌ಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ಕೂಡ್ಲಿಗೆರೆ ಹೋಬಳಿ ಕೊಟ್ಟಿದಾಳು ಗ್ರಾಮದ ಸರ್ವೆ ನಂ.೧ ಮತ್ತು ೨ರಲ್ಲಿ ಸಾಗುವಳಿದಾರರು ಸಾಗು ಮಾಡುವ ಸರ್ಕಾರಿ ಹುಲ್ಲುಬನಿ ಜಮೀನಿಗೆ ಸುಮಾರು ೮೦ ಮತ್ತು ೯೦ ವರ್ಷಗಳಿಂದಲೂ ಸರ್ಕಾರಿ ಹುಲ್ಲುಬನಿ ಎಂದು ಪಹಣಿ ಮತ್ತು ಮುಟೇಷನ್ ನಲ್ಲಿ ಇದ್ದು, ಇದೀಗ ಜನವರಿ ತಿಂಗಳ ೨೦೨೩ರಂದು ಅರಣ್ಯವೆಂದು ಪಹಣಿ ಮತ್ತು ಮುಟೇಷನಲ್ಲಿ ನಮೂದಾಗಿರುತ್ತದೆ. ಈ ಮೂಲಕ ಸಾಗುವಳಿ ರೈತರಿಗೆ ಅನ್ಯಾಯವಾಗಿರುತ್ತದೆ ಎಂದು ಆರೋಪಿಸಲಾಗಿದೆ.
ಇದೇ ರೀತಿ ಹೊಳೆಹೊನ್ನೂರು ಹೋಬಳಿ ಉಕ್ಕುಂದ ಗ್ರಾಮದ ಸರ್ವೆ ನಂ. ೧೦ರಲ್ಲಿ ಸಹ ಮತ್ತು ಎರೆಹಳ್ಳಿ ಗ್ರಾಮದ ಸರ್ವೆ ನಂ ೧೩ ಮತ್ತು ೧೪ರಲ್ಲಿ ಇದೇ ರೀತಿ ಸಮಸ್ಯೆಯು ರೈತರು ಸಾಗುವಳಿ ಮಾಡುತ್ತಿದ್ದ ಗೋಮಾಳ ಜಮೀನು ಮತ್ತು ಸರ್ಕಾರಿ ಹುಲ್ಲುಬನಿ ಜಮೀನಿಗೆ ಜನವರಿ ೨೦೨೩ರಂದು ವಹಣಿ ಮತ್ತು ಮುಟೇಷ್‌ನಲ್ಲಿ ಅರಣ್ಯವೆಂದು ತಿದ್ದುಪಡಿಯಾಗಿರುತ್ತದೆ. ಕಸಬಾ ಹೋಬಳಿ ಸಿರಿಯೂರು ಗ್ರಾಮದ ಸರ್ವೆ ನಂ. ೧೨ ಮತ್ತು ೬೭ ರಲ್ಲಿ ಇದೇ ರೀತಿ ವಹಣಿ ಮತ್ತು ಮುಟೇಷನ್ ತಿದ್ದುಪಡಿಯಾಗಿದ್ದು, ಸುಮಾರು ವರ್ಷಗಳಿಂದ ರೈತರು ಸಾಗುವಳಿ ಮಾಡುತ್ತಿದ್ದ ರೈತರ ಜಮೀನುಗಳು ರೈತರ ಗಮನಕ್ಕೆ ಬಾರದೆ ಮತ್ತು ನೋಟೀಸ್ ನೀಡದೆ ತಾಲೂಕಿನಾದ್ಯಂತ ಸಾಗುವಳಿ ಮಾಡುತ್ತಿರುವ ರೈತರಿಗೆ ಈ ಹಿಂದಿನ ತಾಲೂಕು ದಂಡಾಧಿಕಾರಿಗಳು ಮತ್ತು ಅರಣ್ಯಾಧಿಕಾರಿಗಳು ಅನ್ಯಾಯ ಮಾಡಿರುತ್ತಾರೆ. ಆದುದರಿಂದ ಅನ್ಯಾಯವಾಗದಂತೆ ರೈತರಿಗೆ ಅನುಕೂಲವಾಗುವಂತೆ ಸಾಗುವಳಿ ಮಾಡಿಕೊಂಡು ಬರುವ ರೈತರಿಗೆ ಅವರ ಜಮೀನಿನ ಮೇಲೆ ಯಾವುದೇ ರೀತಿಯ ತೊಂದರೆ ನೀಡಬಾರದು ಮತ್ತು ತಿದ್ದುಪಡಿಯಾಗಿರುವ ಪಹಣಿ ಮತ್ತು ಮುಟೇಷನ್ ಈ ಹಿಂದೆ ಇದ್ದ ದಾಖಲಾತಿಯಂತೆ ನಮೂದು ಮಾಡಬೇಕು ಮತ್ತು ರೈತರಿಗೆ ಸಾಗುವಳಿ ಚೀಟಿಯನ್ನು ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕಿರಣ, ಸೈಯದ್ ಮೆಹಬೂಬ್, ನಾಗರಾಜ್, ಸುರೇಶ, ಬಸರಾಜಪ್ಪ, ಸಿ. ರಂಗಸ್ವಾಮಿ, ಎಸ್. ಜಗದೀಶ್, ಕೆ.ಆರ್ ಕಾರ್ತಿಕ್, ಯಶವಂತ, ಜಿ. ಕುಮಾರ, ಗಂಗಮ್ಮ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment