ಭದ್ರಾವತಿ, ಮಾ. 13: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇಂದಿನ ಸ್ಥಿತಿಗತಿ ಹಾಗೂ ಕಾರ್ಖಾನೆ ಉಳಿವಿನ ವಿಚಾರದಲ್ಲಿ ಗುತ್ತಿಗೆ ಕಾರ್ಮಿಕರ ಸಂಘ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಕುರಿತು ಕಾರ್ಮಿಕರ ನಿಯೋಗ ಬೆಂಗಳೂರಿನಲ್ಲಿ ಕಾರ್ಖಾನೆಯ ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಹಾಗೂ ಕಾರ್ಖಾನೆಯ ನಿವೃತ್ತ ಅಧಿಕಾರಿಗಳನ್ನು ಭೇಟಿಮಾಡಿ ಚರ್ಚೆ ನಡೆಸಿತು.
ದೊಡ್ಡಣ್ಣ ಮಾತನಾಡಿ, ನಮಗೆ ಅನ್ನ, ಬದುಕು ನೀಡಿರುವ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚಬಾರದು. ಮುಂದಿನ ಪೀಳಿಗೆಗೆ ಇದು ಉಳಿಯ ಬೇಕು. ಈ ಹಿನ್ನೆಲೆಯಿಂದ ವಿಐಎಸ್ಎಲ್ ಉಳಿಸಿ ಜಂಟಿ ಕ್ರಿಯಾ ಸಮಿತಿ ರಚಿಸಿ ಮುಖ್ಯಮಂತ್ರಿ ಹಾಗು ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರನ್ನು ತುರ್ತಾಗಿ ಭೇಟಿಯಾಗಿ ಕಾರ್ಖಾನೆ ಉಳುಸಿಕೊಳ್ಳಲು ಹೋರಾಟ ನಡೆಸುವುದಾಗಿ ಭರವಸೆ ನೀಡಿದರು.
ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾಯಂ ಹಾಗು ನಿವೃತ್ತ ಕಾರ್ಮಿಕರು ಉಪಸ್ಥಿತರಿದ್ದರು.
No comments:
Post a Comment