ಮಂಜುಳಾ ಬಾಯಿ
ಭದ್ರಾವತಿ, ಏ. ೧೨ : ಕಾಗದನಗರದ ನಿವಾಸಿ, ಕುಂಟೆ ಟೈಲರ‍್ಸ್‌ನ ದಿವಂಗತ ಕೆ.ಎಸ್ ಗುರುನಾಥರಾವ್ ಕುಂಟೆಯವರ ಧರ್ಮಪತ್ನಿ ಮಂಜುಳಾ ಬಾಯಿ(೭೬) ಬುಧವಾರ ಬೆಳಿಗ್ಗೆ ನಿಧನ ಹೊಂದಿದರು.
ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು ಮೊಮ್ಮಕ್ಕಳನ್ನು ಇದ್ದರು. ಇವರ ಅಂತ್ಯಕ್ರಿಯೆ ಬುಳ್ಳಾಪುರ ಶಂಕ್ರಪ್ಪನಕಟ್ಟೆ ಸಮೀಪದ ಶ್ರೀ ಸತ್ಯಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ಸಂಜೆ ನೆರವೇರಿತು.
ಮಂಜುಳಾ ಬಾಯಿ ಹಿರಿಯ ಪತ್ರಕರ್ತ ಕೆ.ಎನ್ ರವೀಂದ್ರನಾಥ್(ಬ್ರದರ್)ರವರ ಚಿಕ್ಕಮ್ಮ. ಇವರ ನಿಧನಕ್ಕೆ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.
No comments:
Post a Comment