ಭದ್ರಾವತಿ ಹಳೇನಗರದ ಉಪ್ಪಾರ ಬೀದಿ ಶ್ರೀ ಅಂತರಘಟ್ಟಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಅಮ್ಮನವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
ಭದ್ರಾವತಿ, ಏ. ೧೨: ಹಳೇನಗರದ ಉಪ್ಪಾರ ಬೀದಿ ಶ್ರೀ ಅಂತರಘಟ್ಟಮ್ಮನವರ ಜಾತ್ರಾ ಮಹೋತ್ಸವ ಏ.೧೬ರವರೆಗೆ ನಡೆಯಲಿದ್ದು, ಏ.೧೪ರಂದು ರಥೋತ್ಸವ ನಡೆಯಲಿದೆ.
ಸಿದ್ದರ ಪೂಜೆ ಮತ್ತು ಧ್ವಜಾರೋಹಣದೊಂದಿಗೆ ಸೋಮವಾರದಿಂದ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಮಂಗಳವಾರ ರಾತ್ರಿ ರಾಜಬೀದಿ ಉತ್ಸವ, ಬುಧವಾರ ಬೆಳಿಗ್ಗೆ ಗಂಗೆ ಪೂಜೆ ನಂತರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕೆಂಡಾರ್ಚನೆ ನಡೆಯಿತು.
ಏ.೧೩ರ ಗುರುವಾರ ಮಧ್ಯಾಹ್ನ ೩ ಗಂಟೆಗೆ ಕುದುರೆ ವಾಹನದೊಂದಿಗೆ ರಾಜಬೀದಿ ಉತ್ಸವ, ೧೪ರಂದು ಸಂಜೆ ೫ ಗಂಟೆಗೆ ಶ್ರೀ ಅಂತರಘಟ್ಟಮ್ಮ ದೇವಿಯವರ ಧಾರೆ ಮಹೋತ್ಸವ ನಂತರ ರಥೋತ್ಸವ ಮತ್ತು ರಾತ್ರಿ ೮ಕ್ಕೆ ಪ್ರಸಾದ ವಿತರಣೆ ಹಾಗು ೧೫ರಂದು ಮಧ್ಯಾಹ್ನ ೧೨ ಗಂಟೆಗೆ ಓಕಳಿ ನಡೆಯಲಿದೆ.
ಏ.೧೬ರಂದು ಕುಸ್ತಿ ಪಂದ್ಯಾವಳಿ :
ಕುಸ್ತಿ ಪಂದ್ಯಾವಳಿ ಆಯೋಜಿಸುವುದು ಈ ಜಾತ್ರಾ ಮಹೋತ್ಸವದ ವಿಶೇಷತೆಗಳಲ್ಲಿ ಒಂದಾಗಿದ್ದು, ಏ.೧೬ ರಂದು ಬೆಳಿಗ್ಗೆ ೧೧ ರಿಂದ ಸಂಜೆ ೬ ಗಂಟೆವರೆಗೆ ಕನಕಮಂಟಪ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಈ ಭಾಗದಲ್ಲಿ ಕುಸ್ತಿ ಫೈಲ್ವಾನ್‌ಗಳು ಹೆಚ್ಚಾಗಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಲಿದ್ದಾರೆ.
ಭದ್ರಾವತಿ ಹಳೇನಗರದ ಉಪ್ಪಾರ ಬೀದಿ ಶ್ರೀ ಅಂತರಘಟ್ಟಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ರಾತ್ರಿ ಜರುಗಿದ ರಾಜಬೀದಿ ಉತ್ಸವ ಹಾಗು ಇನ್ನಿತರ ಧಾರ್ಮಿಕ ಆಚರಣೆಗಳಲ್ಲಿ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು.
No comments:
Post a Comment