ಕುಮಾರ್
ಭದ್ರಾವತಿ, ಏ. ೧೨ : ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ, ಉಜ್ಜನಿಪುರ ರೈತರ ಸಹಕಾರ ಸಂಘ ನಿಯಮಿತ (ಆರ್‌ಎಸ್‌ಎಸ್‌ಎನ್ ಸೊಸೈಟಿ) ಕಾರ್ಯದರ್ಶಿ ಕುಮಾರ್(೪೬) ನಿಧನ ಹೊಂದಿದರು.
ಪತ್ನಿ, ಒಂದು ವರ್ಷದ ಗಂಡು ಮಗು ಇದ್ದು, ಸುಮಾರು ೩ ವರ್ಷಗಳ ಹಿಂದೆ ವಿವಾಹವಾಗಿದ್ದರು. ಸುಮಾರು ೧೫ ವರ್ಷಗಳಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಅಂತ್ಯಕ್ರಿಯೆ ತುರುವೇಕೆರೆ ತಾಲೂಕಿನ ಗೋಚಿಹಳ್ಳಿ ಗ್ರಾಮದಲ್ಲಿ ಬುಧವಾರ ನೆರವೇರಿತು.
ಇವರ ನಿಧನಕ್ಕೆ ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.
No comments:
Post a Comment