ಭದ್ರಾವತಿ ನ್ಯೂಟೌನ್ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಎಸ್.ಕೆ ಸುಧೀಂದ್ರ ವಿಧಾನಸಭಾ ಚುನಾವಣೆಗೆ ೨ನೇ ಬಾರಿಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ.
ಭದ್ರಾವತಿ, ಏ. ೨೦: ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಗುರುವಾರ ೪ ಮಂದಿ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ.
ನ್ಯೂಟೌನ್ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಎಸ್.ಕೆ ಸುಧೀಂದ್ರ ೨ನೇ ಬಾರಿಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಜನ್ನಾಪುರ ಮಲ್ಲೇಶ್ವರ ದೇವಸ್ಥಾನದಿಂದ ಡೊಳ್ಳು ಕುಣಿತ, ಮಂಗಳವಾದ್ಯ, ನಾದಸ್ವರ ಸೇರಿದಂತೆ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಮಿನಿವಿಧಾನಸೌಧ ತಾಲೂಕು ಕಛೇರಿಗೆ ಆಗಮಿಸಲಾಯಿತು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪತ್ನಿ ರೇಷ್ಮಾ, ಬಿ. ಜಗದೀಶ್, ಸಂಜೀವರೆಡ್ಡಿ ಉಪಸ್ಥಿತರಿದ್ದರು.
ಸುಧೀಂದ್ರ ಬಳಿ ೧.೫ ಲಕ್ಷ ರು. ನಗದು:
ನಗರದ ನ್ಯೂಟೌನ್ ನಿವಾಸಿ, ೪೮ ವರ್ಷ ವಯಸ್ಸಿನ ಎಸ್.ಕೆ ಸುಧೀಂದ್ರರವರ ಬಳಿ ೧.೫ ಲಕ್ಷ ರು. ನಗದು, ಬ್ಯಾಂಕ್ ಖಾತೆಯಲ್ಲಿ ೧.೫ ಲಕ್ಷ ರು. ಇದೆ. ಉಳಿದಂತೆ ಆಸ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವ ಹಿನ್ನಲೆಯಲ್ಲಿ ಆಸ್ತಿ ವಿವರ ಸಲ್ಲಿಕೆಯಾಗಿಲ್ಲ. ಸುಮಾರು ೪ ರಿಂದ ೫ ಲಕ್ಷ ರು. ಚಿನ್ನಾಭರಣ, ಮಾರುತಿ ಸುಜುಕಿ ಸ್ವಿಫ್ಟ್ ಕಾರು ಮತ್ತು ಒಂದು ದ್ವಿಚಕ್ರ ವಾಹನವಿದೆ. ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡಿದ್ದಾರೆ.
ಭದ್ರಾವತಿ ತಾಲೂಕಿನ ನಾಗತಿಬೆಳಗಲು ತಾಂಡ ನಿವಾಸಿ, ಕರುನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಶಶಿಕುಮಾರ್ ವೈ. ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ.
ತಾಲೂಕಿನ ನಾಗತಿಬೆಳಗಲು ತಾಂಡ ನಿವಾಸಿ, ಕರುನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಶಶಿಕುಮಾರ್ ವೈ. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತಂದೆ ಯೋಗೇಂದ್ರನಾಯ್ಕ, ಸಮಿತಿ ಪ್ರಮುಖರಾದ ಚೆನ್ನಾನಾಯ್ಕ, ನಂಜಾನಾಯ್ಕ ಮತ್ತು ರುಪ್ಲನಾಯ್ಕ ಉಪಸ್ಥಿತರಿದ್ದರು.
ಶಶಿಕುಮಾರ್ ಬಳಿ ೧೦ ಸಾವಿರ ರು. ನಗದು :
ಸಮಾಜ ಸೇವಕರು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮತ್ತು ಹೋರಾಟಗಾರರಾಗಿರುವ ಸುಮಾರು ೪೨ ವರ್ಷ ವಯಸ್ಸಿನ ಶಶಿಕುಮಾರ್‌ರವರ ಬಳಿ ೧೦ ಸಾವಿರ ರು. ನಗದು, ಬ್ಯಾಂಕ್ ಖಾತೆಯಲ್ಲಿ ೪೦ ಸಾವಿರ ರು. ಇದೆ. ಪ್ರಸ್ತುತ ಬಾಡಿಗೆ ಮನೆಯಲ್ಲಿದ್ದು, ಇವರ ಪತ್ನಿ ಹೆಸರಿನಲ್ಲಿ ನಿವೇಶನವಿದೆ. ಕಾರು ಮತ್ತು ಬೈಕ್ ಹೊಂದಿದ್ದು, ಇಬ್ಬರು ಮಕ್ಕಳಿದ್ದಾರೆ. ಎಸ್‌ಎಸ್‌ಎಲ್‌ಸಿ, ಜೆಓಸಿ ವ್ಯಾಸಂಗ ಮಾಡಿದ್ದಾರೆ.
ಭದ್ರಾವತಿ ಹಳೇನಗರದ ಎನ್‌ಎಸ್‌ಟಿ ರಸ್ತೆ (ಚಿನ್ನ-ಬೆಳ್ಳಿ ರಸ್ತೆ) ನಿವಾಸಿ ಎಸ್. ರಾಜಶೇಖರ್ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ.
ಹಳೇನಗರದ ಎನ್‌ಎಸ್‌ಟಿ ರಸ್ತೆ (ಚಿನ್ನ-ಬೆಳ್ಳಿ ರಸ್ತೆ) ನಿವಾಸಿ ಎಸ್. ರಾಜಶೇಖರ್ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರಮುಖರಾದ ಬಿ.ವಿ ಚಂದನ್‌ರಾವ್, ಸುರೇಶ್, ಅರವಿಂದ್, ಅನಿಲ್ ಉಪಸ್ಥಿತರಿದ್ದರು.
ರಾಜಶೇಖರ್ ಬಿ.ಕಾಂ ಪದವಿಧರ :
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತನಾಗಿ, ಲಿಂಗಾಯತ ಸಮಾಜದ ಯುವ ಮುಖಂಡರಾಗಿ ಗುರುತಿಸಿಕೊಂಡಿರುವ ರಾಜಶೇಖರ್ ಬಿ.ಕಾಂ ಪದವಿಧರರಾಗಿದ್ದು, ಯಾವುದೇ ಆಸ್ತಿ ಹೊಂದಿರುವುದಿಲ್ಲ. ಇಬ್ಬರು ಮಕ್ಕಳಿದ್ದು, ಸ್ವಂತ ಮನೆ ಸಹ ಇರುವುದಿಲ್ಲ.
ಭದ್ರಾವತಿ ಜನ್ನಾಪುರ ರಾಜಪ್ಪ ಲೇ ಔಟ್ ನಿವಾಸಿ ಮೋಹನ್ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ.
ಜನ್ನಾಪುರ ರಾಜಪ್ಪ ಲೇ ಔಟ್ ನಿವಾಸಿ ಮೋಹನ್ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ವೆಂಕಟೇಶ್‌ಮೂರ್ತಿ ಉಪಸ್ಥಿತರಿದ್ದರು.
ಡಿಪ್ಲೋಮಾ ಎಂ.ಟೆಕ್ ಪದವಿಧರ :
ಡಿಪ್ಲೋಮಾ ಎಂ.ಟೆಕ್ ಪದವಿಧರರಾಗಿರುವ ಸುಮಾರು ೪೩ ವರ್ಷ ವಯಸ್ಸಿನ ಮೋಹನ್ ಕೃಷಿಕರಾಗಿದ್ದು, ಇವರಿಗೆ ಓರ್ವ ಪುತ್ರ ಇದ್ದಾರೆ. ಇವರ ಬಳಿ ಒಂದು ದ್ವಿಚಕ್ರ ವಾಹನವಿದ್ದು, ಸುಮಾರು ೧೫೦ ಚಿನ್ನಾಭರಣ ಹೊಂದಿದ್ದಾರೆ. ೧ ಲಕ್ಷ ರು. ನಗದು ಇದ್ದು, ೫ ಸಾವಿರ ರು. ಬ್ಯಾಂಕ್ ಖಾತೆಯಲ್ಲಿದೆ.
No comments:
Post a Comment