ಭದ್ರಾವತಿ, ಏ. ೨ : ನಗರಸಭೆ ೨೦೨೩-೨೪ನೇ ಸಾಲಿನ ಆಸ್ತಿ ತೆರಿಗೆ ಏ.೩೦ರೊಳಗೆ ಪಾವತಿಸಿದ್ದಲ್ಲಿ ಶೇ.೫ರಷ್ಟು ರಿಯಾಯಿತಿ ನೀಡಲಾಗುವುದು. ತೆರಿಗೆ ಪಾವತಿಗಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರಸಭೆ ಕಛೇರಿ ಆವರಣದಲ್ಲಿ ಎರಡು ಹೆಚ್ಚಿನ ಕೌಂಟರ್‌ಗಳನ್ನು ತೆರೆಯಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.
ಏ.೩೦ರವರೆಗೆ ಮಾತ್ರ ಶೇ.೫ರಷ್ಟು ರಿಯಾಯಿತಿ ಇದ್ದು, ಉಳಿದಂತೆ ಮೇ.೧ ರಿಂದ ಜೂ.೩೦ರವರೆಗೆ ಯಾವುದೇ ರಿಯಾಯಿತಿ ಅಥವಾ ದಂಡ ಇರುವುದಿಲ್ಲ. ಜು.೧ರ ನಂತರ ಪಾವತಿಸಿದ್ದಲ್ಲಿ ಶೇ.೨ರಷ್ಟು ದಂಡ ವಿಧಿಸಲಾಗುವುದು.
ಬಾಕಿ ಇರುವ ಆಸ್ತಿ ತೆರಿಗೆ, ನೀರಿನ ತೆರಿಗೆ, ವಾಣಿಜ್ಯ ಮಳಿಗೆ ಬಾಡಿಗೆ ಮತ್ತು ಉದ್ದಿಮೆ ಪರವಾನಿಗೆಯನ್ನು ಏ.೩೦ರೊಳಗೆ ಪಾವತಿಸುವ ಮೂಲಕ ಸಹಕರಿಸುವಂತೆ ಕೋರಲಾಗಿದೆ. ತೆರಿಗೆ ಪೋನ್ ಪೇ, ಪೇ ಟಿಎಂ, ಗೂಗಲ್ ಪೇ ಮೂಲಕ ಸಹ ಪಾವತಿಸಬಹುದಾಗಿದೆ.
No comments:
Post a Comment