ಸೀತಾರಾಮರಾವ್
ಭದ್ರಾವತಿ, ಏ. ೩: ನಗರದ ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನ ಹಾಗು ಶಿವಮೊಗ್ಗ ಶಂಕರ ಮಠ ರಸ್ತೆಯಲ್ಲಿರುವ ನವಿಲೇ ದೇವಸ್ಥಾನದ ಅರ್ಚಕರಾಗಿದ್ದ ಶತಾಯುಷಿ ಸೀತಾರಾಮ ರಾವ್(೧೦೧) ನಿಧನ ಹೊಂದಿದರು.
೮ ಹೆಣ್ಣು, ೨ ಗಂಡು ಮಕ್ಕಳಿದ್ದು, ಶಿವಮೊಗ್ಗದಲ್ಲಿ ಇವರ ಅಂತ್ಯಸಂಸ್ಕಾರ ನೆರವೇರಲಿದೆ. ಸೀತಾರಾಮ ರಾವ್‌ರವರು ಸುಮಾರು ೨೫ ವರ್ಷ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಇವರ ಪುತ್ರ ರವಿಕುಮಾರ್ ಈ ದೇವಸ್ಥಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಸೀತಾರಾಮ ರಾವ್‌ರವರ ಅಂತ್ಯಕ್ರಿಯೆ ಸೋಮವಾರ ಶಿವಮೊಗ್ಗದಲ್ಲಿ ನೆರವೇರಿತು. ಇವರ ನಿಧನಕ್ಕೆ ಅರ್ಚಕ ಸಮುದಾಯದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
No comments:
Post a Comment