ಭದ್ರಾವತಿ, ಏ. ೧೦: ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಏ.೮ರಂದು ಬೆಳಿಗ್ಗೆ ೧೦.೩೦ ಸಮಯದಲ್ಲಿ ತಾಲೂಕಿನ ಕಾಚಗೊಂಡನಹಳ್ಳಿ ವಿಜಯನಗರ ಗ್ರಾಮದ ಸ್ಮಶಾನ ರಸ್ತೆಯಲ್ಲಿ ಪ್ರಭು ಸೇರಿದಂತೆ ಇನ್ನಿತರರು ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವಾಗ ದಾಳಿ ನಡೆಸಲಾಗಿದೆ.
ಏ.೮ರಂದು ರಾತ್ರಿ ೭.೪೫ರ ಸಮಯದಲ್ಲಿ ನಗರದ ಸಿ.ಎನ್ ರಸ್ತೆ, ಆರ್‌ಎಂಸಿ ಎದುರುಗಡೆ ಭಾರತ್ ಪೆಟ್ರೋಲ್ ಬಂಕ್ ಹಿಂಭಾಗದ ಖಾಲಿ ಜಾಗದಲ್ಲಿ ಮಂಜುನಾಥ್ ಸೇರಿದಂತೆ ಇನ್ನಿತರರು ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವಾಗ ದಾಳಿ ನಡೆಸಲಾಗಿದೆ.
No comments:
Post a Comment