ಭದ್ರಾವತಿ, ಮೇ. ೪: ಶಿವಮೊಗ್ಗಕ್ಕೆ ಬಾಡಿಗೆಗೆ ಬಂದಿದ್ದ ಕಾರು ಚಾಲಕನೋರ್ವ ರಸ್ತೆ ಬದಿ ತನ್ನ ಕಾರು ನಿಲ್ಲಿಸಿ ಸಮೀಪದಲ್ಲಿರುವ ಅಂಗಡಿಗೆ ತೆರಳಿ ಬರುವಷ್ಟರಲ್ಲಿ ಕಾರನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೀರೂರಿನ ಬಳ್ಳಾರಿ ಕ್ಯಾಂಪ್‌ನಿಂದ ಸುಮಾರು ೨೭ ವರ್ಷ ವಯಸ್ಸಿನ ಚಾಲಕ ಎ. ರಜನಿಕಾಂತ್, ಏ.೨೮ರಂದು ಬೆಳಿಗ್ಗೆ ೩ ಗಂಟೆ ಸಮಯದಲ್ಲಿ ಶಿವಮೊಗ್ಗಕ್ಕೆ ಬಾಡಿಗೆಗೆ ತೆರಳಿದ್ದು, ಮಧ್ಯಾಹ್ನ ೩.೪೫ರ ಸಮಯದಲ್ಲಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಎನ್.ಎಚ್ ೨೦೬ ರಸ್ತೆಯ ಜೇಡಿಕಟ್ಟೆ ಹತ್ತಿರ ಕಾರನ್ನು ಅಲ್ಲೇ ನಿಲ್ಲಿಸಿ ಕಾರಿನ ಕೀ ಅಲ್ಲಿಯೇ ಬಿಟ್ಟು ಅಂಗಡಿಯ ಹತ್ತಿರ ಹೋಗಿ ಬರುವಷ್ಟರಲ್ಲಿ ಕಾರಿನ ಹಿಂಬದಿಯ ಆಸನದಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ಡಿಸೈರ್ ಕಾರನ್ನು ಶಿವಮೊಗ್ಗ ಕಡೆಗೆ ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಎ. ರಜನಿಕಾಂತ್ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
No comments:
Post a Comment