Monday, May 22, 2023

ನೆಲಕ್ಕುರುಳುವ ಸ್ಥಿತಿಯಲ್ಲಿ ತೆಂಗಿನ ಮರ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತ ಮಾರುಕಟ್ಟೆ ಸಮೀಪದ ರಸ್ತೆಯೊಂದರಲ್ಲಿ ಬೃಹತ್ ಗಾತ್ರದ ತೆಂಗಿನ ಮರ ನೆಲಕ್ಕುರುಳುವ ಸ್ಥಿತಿಯಲ್ಲಿದ್ದು, ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ.
    ಭದ್ರಾವತಿ, ಮೇ. ೨೨: ಹಳೇನಗರದ ಬಸವೇಶ್ವರ ವೃತ್ತ ಮಾರುಕಟ್ಟೆ ಸಮೀಪದ ರಸ್ತೆಯೊಂದರಲ್ಲಿ ಬೃಹತ್ ಗಾತ್ರದ ತೆಂಗಿನ ಮರ ನೆಲಕ್ಕುರುಳುವ ಸ್ಥಿತಿಯಲ್ಲಿದ್ದು, ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ.
    ಮಾರುಕಟ್ಟೆಯಿಂದ ನ್ಯಾಯಾಲಯದ ಮುಂಭಾಗದ ರಸ್ತೆಗೆ ಸಂಪರ್ಕಗೊಂಡಿರುವ ಕಿರು ರಸ್ತೆ ಇದಾಗಿದ್ದು, ಈ ರಸ್ತೆಯಲ್ಲಿ ಪಾದಚಾರಿಗಳು ಹೆಚ್ಚಾಗಿ ಸಂಚರಿಸುತ್ತಾರೆ. ಈ ರಸ್ತೆಯಲ್ಲಿ ತೆಂಗಿನ ಮರ ಬಹುತೇಕ ಒಂದೆಡೆ ಬಾಗಿದ್ದು, ಮಳೆ ಬಿರುಗಾಳಿಗೆ ನೆಲಕ್ಕುರುಳುವ ಸಾಧ್ಯತೆ ಹೆಚ್ಚಾಗಿದೆ.
    ಒಂದು ವೇಳೆ ತೆಂಗಿನ ಮರ ನೆಲಕ್ಕುರುಳಿದ್ದಲ್ಲಿ ಕಟ್ಟಡಕ್ಕೆ ಹಾನಿ ಉಂಟಾಗಲಿದ್ದು, ಅಲ್ಲದೆ ಕೆಳ ಭಾಗದಲ್ಲಿರುವ ವಿದ್ಯುತ್ ಕಂಬ ಮುರಿದು ಬಿದ್ದು, ವಿದ್ಯುತ್ ತಂತಿ ಕತ್ತರಿಸಿ ಹೋಗಲಿದೆ. ಅಲ್ಲದೆ ಪ್ರಾಣಹಾನಿಯಂತಹ ದುರ್ಘಟನೆ ಸಹ ಸಂಭವಿಸುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ.

1 comment:

  1. ಇಂತ ಮರಗಳು ಹಲವಾರು ಇದೆ,ಡಬ್ಬಲ್ ರೋಡ್ ನಲ್ಲಿ ಹಲವಾರು ಮರಾಗಳು ಬಿಳುವ ಹಂತದಲ್ಲಿ ಇದೆ,ಹಲವಾರು ಬಾರಿ ಪೋಸ್ಟ್ ಮಾಡಿದರೂ,ನಗರಸಭೆ ನಿದ್ದೆ ಇಂದ ಎದ್ದಿಲ್ಲ ನೂತನ ಶಾಸಕರು ಕೂಡ ಗಮನ ಹರಿಸಿಲ್ಲ

    ReplyDelete