ಶಿವಮೊಗ್ಗ ಪೋದರ್ ಶಾಲೆಯ ವಿದ್ಯಾರ್ಥಿನಿ ಕೆ.ಪಿ ಪ್ರಾರ್ಥನಾ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ .
ಭದ್ರಾವತಿ, ಜು. ೧೭ : ಶಿವಮೊಗ್ಗ ಪೋದರ್ ಶಾಲೆಯ ವಿದ್ಯಾರ್ಥಿನಿ ಕೆ.ಪಿ ಪ್ರಾರ್ಥನಾ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಸ್ಮಶ್ ಐಟಿ ಸಹಕಾರದೊಂದಿಗೆ ಶಿವಮೊಗ್ಗ ಗೋಪಾಲದಲ್ಲಿ ಆಯೋಜಿಸಲಾಗಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಸೀಸನ್-೧ ಜ್ಯೂನಿಯರ್ ಕಪ್ ತಮ್ಮದಾಗಿಸಿಕೊಂಡು ಕೀರ್ತಿ ತಂದಿದ್ದಾರೆ.
ಕೆ.ಪಿ ಪಾರ್ಥನಾ ನಗರಸಭೆ ಕಿರಿಯ ಅಭಿಯಂತರ ಪ್ರಸಾದ್ ಅವರ ಪುತ್ರಿಯಾಗಿದ್ದು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಅಭಿನಂದಿಸಿದ್ದಾರೆ.
No comments:
Post a Comment