ಭದ್ರಾವತಿಯಲ್ಲಿ ಕಳೆದ ಕೆಲವು ದಿನಗಳಿಂದ ನಗರಸಭೆ ವ್ಯಾಪ್ತಿಯ ಕೆರೆಗಳ ಒತ್ತುವರಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಪೌರಾಯುಕ್ತರ ನೇತೃತ್ವದ ತಂಡ ಸೋಮವಾರ ಬೊಮ್ಮನಕಟ್ಟೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿತು.
ಭದ್ರಾವತಿ, ಜು. ೧೭: ಕಳೆದ ಕೆಲವು ದಿನಗಳಿಂದ ನಗರಸಭೆ ವ್ಯಾಪ್ತಿಯ ಕೆರೆಗಳ ಒತ್ತುವರಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಪೌರಾಯುಕ್ತರ ನೇತೃತ್ವದ ತಂಡ ಸೋಮವಾರ ಬೊಮ್ಮನಕಟ್ಟೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿತು.
ತಾಲೂಕು ಕಛೇರಿ ಹಾಗು ಕಂದಾಯ ಇಲಾಖೆ ಸಹಕಾರದೊಂದಿಗೆ ಪೌರಾಯುಕ್ತ ಮನುಕುಮಾರ್‌ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೊಮ್ಮನಕಟ್ಟೆ ಸರ್ವೆ ನಂ. ೩೩ರ ಕೆರೆ ಒತ್ತುವರಿ ನಡೆಸಿತು.
ಕಳೆದ ವಾರ ಸಿದ್ದಾಪುರ ಕಸಬಾ ಹೋಬಳಿ ಸಂಕ್ಲಿಪುರ ಸುಮಾರು ೮ ಎಕರೆ ೩೨ ಗುಂಟೆ ವಿಸ್ತೀಣವುಳ್ಳ ಸರ್ವೆ ನಂ. ೧೩೩ರ ಕೆರೆ ಹಾಗು ಬೊಮ್ಮನಕಟ್ಟೆ ಸರ್ವೆ ನಂ.೧ರ ಕೆರೆ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ನಗರಸಭೆ ವ್ಯಾಪ್ತಿಯಲ್ಲಿ ಬಹಳಷ್ಟು ಕೆರೆಗಳು ಒತ್ತುವರಿಯಾಗಿದ್ದು, ಹಂತ ಹಂತವಾಗಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.
No comments:
Post a Comment